ವಿಜಯಪುರ: ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

7

ವಿಜಯಪುರ: ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

Published:
Updated:

ವಿಜಯಪುರ: ಜಮೀನಿನ ವಾಟ್ನಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಸಾರವಾಡ ಗ್ರಾಮ ಲೆಕ್ಕಾಧಿಕಾರಿ ಚನ್ನವೀರಯ್ಯ ಹಿರೇಮಠ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಬಲೇಶ್ವರ ತಾಲ್ಲೂಕಿನ ಸಾರವಾಡದ ಅನಿಲಕುಮಾರ ವಿಜಾಪುರ ಎಂಬುವರು ತನ್ನ ಜಮೀನು ವಾಟ್ನಿ ಮಾಡಿಕೊಡುವಂತೆ ಬಬಲೇಶ್ವರದ ವಿಶೇಷ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು.

ಜಮೀನಿನ ವಾಟ್ನಿ ಅರ್ಜಿ ತಹಶೀಲ್ದಾರ್‌ ಕಚೇರಿಯಿಂದ ಗ್ರಾಮ ಲೆಕ್ಕಾಧಿಕಾರಿಗೆ ಬಂದಿತ್ತು. ಚನ್ನವೀರಯ್ಯ ₹ 5000 ಕೊಟ್ಟರೆ ವಾಟ್ನಿ ಮಾಡಿಕೊಡುವುದಾಗಿ ಹೇಳಿದ್ದರು. ಇದಕ್ಕೊಪ್ಪಿದ ಅನಿಲಕುಮಾರ ಎಸಿಬಿಗೆ ದೂರು ನೀಡಿದ್ದರು.

ಒಪ್ಪಂದಂತೆ ಹಿರೇಮಠ ವಿಜಾಪುರ ಅವರಿಂದ ಲಂಚ ಪಡೆಯುವ ಸಂದರ್ಭ, ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಚನ್ನವೀರಯ್ಯನನ್ನು ಬಂಧಿಸಿ, ಲಂಚದ ಹಣ ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !