ಎಸಿಬಿ ಬಲೆಗೆ ಬಾಗಲಕೋಟೆ ಎಇಇ, ಬಂಗಲೆಯಿದ್ದರೂ ಬಾಡಿಗೆ ಮನೆಯಲ್ಲಿದ್ದ ಎಂಜಿನಿಯರ್..!

7

ಎಸಿಬಿ ಬಲೆಗೆ ಬಾಗಲಕೋಟೆ ಎಇಇ, ಬಂಗಲೆಯಿದ್ದರೂ ಬಾಡಿಗೆ ಮನೆಯಲ್ಲಿದ್ದ ಎಂಜಿನಿಯರ್..!

Published:
Updated:

ವಿಜಯಪುರ: ನೆರೆಯ ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚಿದಾನಂದ ಮಿಂಚನಾಳ ನಿವಾಸದ ಮೇಲೆ ಶನಿವಾರ ಎಸಿಬಿ ಪೊಲೀಸರು ದಾಳಿ ನಡೆಸಿ, ತಪಾಸಣೆಗೊಳಪಡಿಸಿದರು.

ವಿಜಯಪುರ ಜಿಲ್ಲೆಯವರಾದ ಚಿದಾನಂದ ನಗರದ ಸುಕೂನ್‌ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಎಸಿಬಿ ಅಧಿಕಾರಿಗಳ ದಾಳಿ ವೇಳೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

300 ಗ್ರಾಂ ಚಿನ್ನ, ₹ 20000 ನಗದು, 1 ಕೆ.ಜಿ. ಬೆಳ್ಳಿ ದಾಳಿ ವೇಳೆ ಸಿಕ್ಕಿದೆ. ಇದೇ ಸಂದರ್ಭ ಇಂಡಿ ತಾಲ್ಲೂಕಿನ ನಿಂಬಾಳ, ಪಡನೂರ ಗ್ರಾಮಗಳಲ್ಲಿ ತಲಾ ಐದು ಎಕರೆ ಭೂಮಿ ಖರೀದಿಸಿರುವುದು ಪತ್ತೆಯಾಗಿದೆ. ವಿಜಯಪುರ ನಗರ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿಯಲ್ಲಿ ತಲಾ ಎರಡು ನಿವೇಶನ ಹೊಂದಿದ್ದಾರೆ.

ವಿಜಯಪುರದ ಸಾಯಿಪಾರ್ಕ್‌ನಲ್ಲಿ ಅತ್ಯಾಧುನಿಕ ಮನೆ ಹೊಂದಿದ್ದರೂ ಅದರಲ್ಲಿ ವಾಸವಿರದೆ ಬಾಡಿಗೆ ಮನೆಯಲ್ಲಿದ್ದಾರೆ. ಈ ಬಗ್ಗೆ ಚಿದಾನಂದ ಅವರನ್ನು ವಿಚಾರಿಸಿದಾಗ ಎನ್‌ಟಿಪಿಸಿ ಅಧಿಕಾರಿಗಳು ಹೆಚ್ಚಿನ ಬಾಡಿಗೆ ಕೊಡುವುದರಿಂದ ಅವರಿಗೆ ಮನೆ ಬಾಡಿಗೆ ಕೊಟ್ಟಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !