ಗುರುವಾರ , ನವೆಂಬರ್ 14, 2019
22 °C

ಹೆಸ್ಕಾಂ ಶಾಖಾಧಿಕಾರಿ ಎಸಿಬಿ ಬಲೆಗೆ

Published:
Updated:
Prajavani

ಆಲಮೇಲ: ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ಗೆ ಅನು ಮತಿ ನೀಡಡುವ ಕಡತಕ್ಕೆ ಸಹಿ ಹಾಕಲು ಲಂಚ ಪಡೆ ಯುತ್ತಿದ್ದ ಪಟ್ಟಣದ ಹೆಸ್ಕಾಂ ಶಾಖಾಧಿಕಾರಿ ಬಸವರಾಜ ಮಣ್ಣೂರ ಅವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಸಮೀಪದ ಬಳಗಾನೂರ ಗ್ರಾಮದ ರೈತ ಲಗಮಣ್ಣ ಕತ್ತನಳ್ಳಿ ಎಸಿಬಿಗೆ ದೂರು ನೀಡಿದವರು. ಇವರ ಜಮೀನಿಗೆ 25 ಕೆ.ವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಬಿಡುಗಡೆ ಮಾಡಲು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಖಾಸಗಿ ಹೋಟೆಲ್‌ನಲ್ಲಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದರು.

ಎಸಿಬಿ ಡಿವೈಎಸ್‌ಪಿ ಜೆ.ರಘು, ಇನ್‌ಸ್ಪೆಕ್ಟರ್‌ಗಳಾದ ಶಿವಶಂಕರ ಗಣಾಚಾರಿ ಹಾಗೂ ರಾಘವೇಂದ್ರ ಹಳ್ಳೂರ ದಾಳಿಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)