ಗುರುವಾರ , ಜನವರಿ 30, 2020
19 °C

ಎಸಿಬಿ ದಾಳಿ: ಕಾನ್‌ಸ್ಟೆಬಲ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಕ್ರಮ ಮರಳು ಸಾಗಣೆಗೆ ಸಹಕಾರ ನೀಡಲು ಹಣ ಪಡೆಯುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್‌ ಸೋಮವಾರ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದಾರೆ.

ತುಂಗಾ ನಗರ ಠಾಣೆಯ ನಾರಾಯಣಸ್ವಾಮಿ ಬಂಧಿತರು. ಅಕ್ರಮ ಮರಳು ವಹಿವಾಟಿನಲ್ಲಿ ಹಸ್ತಕ್ಷೇಪ ಮಾಡದೇ ಇರಲು ಟಿಪ್ಪುನಗರದ ಅಬ್ದುಲ್ ಸಲೀಂ ಅವರ ಬಳಿ ₨  7 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಗೋಪಾಳದಲ್ಲಿ ಹಣ ಪಡೆಯುವಾಗ ಎಸಿಬಿ ಡಿವೈಎಸ್ಪಿ ಮನೋಜ್ ಕುಮಾರ್, ಇನ್‌ಸ್ಪೆಕ್ಟರ್ ವೀರೇಂದ್ರ, ಜೆ.ಎಸ್.ತಿಪ್ಪೇಸ್ವಾಮಿ ಅವರ ತಂಡ ಬಂಧಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು