ಗುರುವಾರ , ಅಕ್ಟೋಬರ್ 17, 2019
28 °C

ಅಪಘಾತ; ರೌಡಿಶೀಟರ್ ಭಾಗಪ್ಪ ಹರಿಜನ ಪತ್ನಿ ಸಾವು

Published:
Updated:

ಇಂಡಿ: ತಾಲ್ಲೂಕಿನ ಕಪನಿಂಬರಗಿ ಬಳಿಯ ವಿಜಯಪುರ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಗೂಡ್ಸ್‌ ವಾಹನ ಮತ್ತು ಕಾರು ಮಧ್ಯೆ ಡಿಕ್ಕಿ ಸಂಭವಿಸಿ ರೌಡಿಶೀಟರ್‌ ಭಾಗಪ್ಪ ಹರಿಜನ ಅವರ ಪತ್ನಿ ಮೃತಪಟ್ಟಿದ್ದಾರೆ.

ಶೋಭಾ ಭಜಂತ್ರಿ (40) ಮೃತರು. ಇವರು ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ನ್ಯಾಯಾಲಯದಲ್ಲಿ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಪಿಪಿ) ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರ್ತಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಆಸ್ಪತ್ರೆಗೆ ದೌಡಾಯಿಸಿದ ಭಾಗಪ್ಪ ಹರಿಜನ ನೆಲದ ಮೇಲೆ ಕುಳಿತುಕೊಂಡು ರೋದಿಸಿದರು.

‘ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರು ಚಾಲಕ ಸುನಿಲ್ ಮತ್ತು ಇವರ ಸ್ನೇಹಿತ ರಾಹುಲ್ ಕೈಕಾಲು ಮುರಿದಿದ್ದು, ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ’ ಎಂದು ಹೊರ್ತಿ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.

Post Comments (+)