ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿತ್ಯರಾವ್‌ಗೆ ಮಾನಸಿಕ ಅಸ್ವಸ್ಥ ಪಟ್ಟ: ಕಾಂಗ್ರೆಸ್ ಟೀಕೆ

Last Updated 24 ಜನವರಿ 2020, 15:49 IST
ಅಕ್ಷರ ಗಾತ್ರ

ಶಿವಮೊಗ್ಗ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಆದಿತ್ಯರಾವ್‌ ಅವರನ್ನು ಗೃಹ ಸಚಿವರೂ ಸೇರಿದಂತೆ ಕೆಲವು ಬಿಜೆಪಿ ಮುಖಂಡರು ಮಾನಸಿಕ ಅಸ್ವಸ್ಥ ಎಂದುಬಿಂಬಿಸುತ್ತಿದ್ದಾರೆ. ಆ ಮೂಲಕ ಶಿಕ್ಷೆಯಿಂದ ಪಾರು ಮಾಡಲು ಪರೋಪಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದುಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪದೂರಿದರು.

ಪೌರತ್ವತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಎಲ್ಲೆಡೆ ಹೋರಾಟ ನಡೆಯುತ್ತಿವೆ. ಹೋರಾಟ ಹತ್ತಿಕ್ಕಲು ರಾಜ್ಯ ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಒಂದು ಧರ್ಮವನ್ನು ಸಂಪೂರ್ಣವಾಗಿ ನಾಶಮಾಡಲು ಹೊರಟಿದ್ದಾರೆ. ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕಪ್ರಭಾಕರ ಭಟ್ ಮತ್ತಿತರರು ಅಲ್ಪಸಂಖ್ಯಾತರನ್ನೇಗುರಿಯಾಗಿಟ್ಟುಕೊಂಡು ಕಾರ್ಯತಂತ್ರ ಮಾಡುತ್ತಿದ್ದಾರೆ.ಕೋಮುಕೃತ್ಯಗಳಿಗೆ ಕಾರ್ಯಕರ್ತರನ್ನು ಪ್ರಚೋದಿಸುತ್ತಿದ್ದಾರೆ.ಪ್ರಚೋದನೆಗೊಂಡು ಕೆಲವು ಹಿಂಬಾಲಕರು ಮತ್ತು ಕಾರ್ಯಕರ್ತರು ಕೋಮುಗಲಭೆಗಳಿಗೆ ಕಾರಣರಾಗುತ್ತಿದ್ದಾರೆಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಆದಿತ್ಯರಾವ್ ಶರಣಾಗಿ ಪೊಲೀಸರು ವಿಚಾರಣೆ ಮಾಡುವ ಮುನ್ನವೇ ಆತನನ್ನು ಮಾನಸಿಕ ಅಸ್ವಸ್ಥ ಎಂದುಬಿಂಬಿಸಲಾಗುತ್ತಿದೆ.ಗೃಹಸಚಿವ, ಸಚಿವರು ಹಾಗೂ ಬಿಜೆಪಿ ಶಾಸಕರು ಯಾವಾಗನ್ಯೂರೋ ಸರ್ಜನ್ ಪದವಿ ಪಡೆದು, ವೈದ್ಯರಾದರು ಎಂದುಪ್ರಶ್ನಿಸಿದರು.

ಆರೋಪಿ ಅಲ್ಪಸಂಖ್ಯಾತನಾಗಿದ್ದರೆ ಭಾರತ ಬಂದ್‌ಗೇ ಕರೆ ಕೊಡುತ್ತಿದ್ದರು. ಅದೇ ಆದಿತ್ಯರಾವ್ಕಾಂಗ್ರೆಸ್ ಮುಖಂಡ ಬಳಿ ಬಾಂಬಿಟ್ಟು ಸಿಕ್ಕಿಕೊಂಡಿದ್ದರೆ ನಾಥೂರಾಮ್ ಗೋಡ್ಸೆ ಮಾದರಿಯಲ್ಲಿ ಪೂಜಿಸಲ್ಪಡುತ್ತಿದ್ದ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕವಿತಾ ರಾಘವೇಂದ್ರ, ಜಫ್ರುಲ್ಲಾ ಷರೀಫ್, ಸೈಮನ್ ರಾಜ್, ಸೈಯದ್ ಮುಜೀಬುಲ್ಲಾ, ಸರೀತಾ, ಅಣ್ಣಪ್ಪ, ಸಂತೋಷ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT