ಕನಕಪುರ: ಮತ್ತೆ ಕಾಣಿಸಿಕೊಂಡ ಕಾಡಾನೆ, ಜನರಲ್ಲಿ ಭೀತಿ

7
ಅಚ್ಚಲು ಅರಣ್ಯ ಪ್ರದೇಶಕ್ಕೆ ಕಾಡಾನೆ ಓಡಿಸುವಲ್ಲಿ ಯಶಸ್ವಿಯಾದ ಅರಣ್ಯಾಧಿಕಾರಿಗಳು

ಕನಕಪುರ: ಮತ್ತೆ ಕಾಣಿಸಿಕೊಂಡ ಕಾಡಾನೆ, ಜನರಲ್ಲಿ ಭೀತಿ

Published:
Updated:

ಕನಕಪುರ: ಹೋಬಳಿ ಅಚ್ಚಲು ಸಮೀಪದ ಉಪ್ಪಕೆರೆದೊಡ್ಡಿ ಗ್ರಾಮದಲ್ಲಿ ಶನಿವಾರ ಬೆಳ್ಳಿಗೆ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಪ್ರದೇಶಕ್ಕೆ ಅಟ್ಟುವಲ್ಲಿ ಸಿಬ್ಬಂದಿ ಯಶ್ವಸಿಯಾಗಿದ್ದಾರೆ.

ಶುಕ್ರವಾರ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಸಾಕಾನೆಗಳ ಸಹಾಯದಿಂದ ಪುಂಡಾನೆಗಳ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು. ಇದರಲ್ಲಿ ಒಂದು ಕಾಡಾನೆ ಮಾತ್ರ ಸೆರೆ ಹಿಡಿಯಲಾಗಿತ್ತು.

ಈ ಆನೆಯೊಂದಿಗಿದ್ದ ಇತರ ಪುಂಡಾನೆಗಳು ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದವು. ಅದರಲ್ಲಿ ಒಂದು ಆನೆ ಉಪ್ಪಕೆರೆದೊಡ್ಡಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು.

ಬೆಳ್ಳಿಗೆ ಗ್ರಾಮದ ಸಮೀಪದ ಮಾವಿನ ತೋಪಿನ ಬಳಿ ಕಾಣಿಸಿಕೊಂಡಿದ್ದ ಆನೆಯನ್ನು ಕಂಡು ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯಾಧಿಕಾರಿಗಳು ಹಗಲಿನ ವೇಳೆ ಆನೆ ಓಡಿಸಿಲು ಪ್ರಯತ್ನಿಸಿದರೆ ಸ್ಥಳೀಯ ಗ್ರಾಮಕ್ಕೆ ನುಗ್ಗಿ ಹಾನಿ ಮಾಡಬಹುದು. ಸಂಜೆವರೆಗೂ ಯಾರು ಈ ಪ್ರದೇಶದಲ್ಲಿ ಓಡಾಡಬೇಡಿ ಎಂದು ಎಚ್ಚರಿಸಿ, ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಿದ್ದರು. ಸಂಜೆ ವೇಳೆಗೆ ಅಚ್ಚಲು ಅರಣ್ಯ ಪ್ರದೇಶಕ್ಕೆ ಕಾಡಾನೆಯನ್ನು ಓಡಿಸುವಲ್ಲಿ ಯಶಸ್ವಿಯಾದರು.

ಕಾಡಾನೆ ಕಾಣಿಸಿಕೊಂಡ ವಿಷಯ ಸಾರ್ವಜನಿಕರಿಂದ ತಿಳಿದು ಉಪ ವಲಯಾರಣ್ಯಧಿಕಾರಿಗಳಾದ ರಾಜು, ಮುತ್ತುಸ್ವಾಮಿನಾಯಕ್, ಅರಣ್ಯ ರಕ್ಷಕರಾದ ತಿಪ್ಪೆಸ್ವಾಮಿ, ಗೋಪಾಲ್ ಮುತ್ತಣ್ಣ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !