ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಕೌಶಲ ಕಲಿಸುವ ‘ಅಗ್ನಿಪಥ್’: ಬಿ.ವೈ.ರಾಘವೇಂದ್ರ ಹೇಳಿಕೆ

Last Updated 16 ಜೂನ್ 2022, 1:48 IST
ಅಕ್ಷರ ಗಾತ್ರ

ಕುಂದಾಪುರ: ನವ ಭಾರತದ ನವಶಕ್ತಿಯ ಮುನ್ನಡೆಗಾಗಿ ಹಾಗೂ ಯುವಕರ ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ನೀಡಿದೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗೆ ಒಂದೂವರೆ ವರ್ಷದೊಳಗೆ ತುರ್ತು ನೇಮಕಾತಿ ಮಾಡುವಂತೆ ಸೂಚಿಸಿದ್ದಾರೆ ಹಾಗೂ ಸೇನೆಗೆ 46,000 ಅಗ್ನಿ ವೀರರನ್ನು 4 ವರ್ಷದ ಸೇವಾವಧಿಯನ್ನು ನೇಮಕ ಮಾಡಿಕೊಳ್ಳುವ ತೀರ್ಮಾನ ಸ್ವಾಗತಾರ್ಹ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

‘ಅಗ್ನಿ ಪಥ್’ ಯೋಜನೆಯ ಮೂಲಕ ಉತ್ಸಾಹಿ ದೇಶಭಕ್ತ ಯುವಕರಿಗೆ ಸೇನೆಗೆ ಸೇರುವ ಸದಾವಕಾಶವನ್ನು ಕಲ್ಪಿಸಿರುವ ಪ್ರಧಾನಿ, ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್‌ ಅಭಿನಂದನಾರ್ಹರು. ಇದು ಕೇವಲ ಉದ್ಯೋಗಾವಕಾಶವಲ್ಲ, ಯುವಕರಿಗೆ, ಶಿಸ್ತುಬದ್ಧ ಜೀವನ ಕೌಶಲವನ್ನು ಕಲಿಸಿಕೊಡುವ ಭಾರತೀಯ ಸೇನೆಯ ವೇದಿಕೆಯಾಗಿದೆ.

‘ಅಗ್ನಿವೀರ’ ಸ್ವಯಂ ಸೇವಕರಾಗಲು ಎಸ್.ಎಸ್.ಎಲ್.ಸಿ. ಪಾಸಾದ 17.5ರಿಂದ 21ರ ನಡುವಿನ ವಯೋಮಾನದವರು ಅರ್ಹರು. ಆಯ್ಕೆಯಾದವರಿಗೆ ದೇಶದ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಲ್ಲಿ ದೇಶಕ್ಕಾಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ಸುವರ್ಣಾವಕಾಶವಿದೆ. 4 ವರ್ಷಗಳ ಬಳಿಕ ಅರ್ಹತೆಯ ಆಧಾರದಲ್ಲಿ ಶೇ 25 ಅಗ್ನಿವೀರರುಗಳ ಮರು-ಸೇರ್ಪಡೆ- ಸೇವಾ ಮುಂದುವರಿಕೆಗೂ ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ https://www.mod.gov.in ಲಿಂಕ್‌ ಮೂಲಕ ಮಾಹಿತಿ ಪಡೆದುಕೊಳ್ಳುವಂತೆ ಸಂಸದರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT