‘ಬೆರಕೆ ಸೊಪ್ಪಿಗೆ ಮಾರಾಟ ಕೇಂದ್ರ’

7
ಮಾಗಡಿಯಲ್ಲಿ ಸಾವಯವ ಕೃಷಿ ತರಬೇತಿ ಕಾರ್ಯಾಗಾರ

‘ಬೆರಕೆ ಸೊಪ್ಪಿಗೆ ಮಾರಾಟ ಕೇಂದ್ರ’

Published:
Updated:
ಸಾವಯವ ಕೃಷಿ ತರಬೇತಿ ಕಾರ್ಯಾಗಾರವನ್ನು ಕಲ್ಲೆಂಟೆ ಪಾಳ್ಯದ ಬಾಳೇಗೌಡ ಉದ್ಘಾಟಿಸಿದರು

ಮಾಗಡಿ: ನೆಲಮೂಲ ಜ್ಞಾನದ ಆದಿವಾಸಿ ಇರುಳಿಗ ಮಹಿಳೆಯರು ಕಾಡಿನಲ್ಲಿ ಸಂಗ್ರಹಿಸುವ ಬೆರಕೆ ಸೊಪ್ಪಿಗೆ ಮಾರಾಟ ಕೇಂದ್ರ ಆರಂಭಿಸಲು ಚಿಂತನೆ ನಡೆದಿದೆ ಎಂದು ಸಹಜ ಸಾಗುವಳಿ ಪತ್ರಿಕೆ ಸಂಪಾದಕಿ ವಿ.ಗಾಯತ್ರಿ ತಿಳಿಸಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಲ್ಲಿ ಇಕ್ರಾ ಸಂಸ್ಥೆ ವತಿಯಿಂದ ಸೋಮವಾರ ನಡೆದ ಸಾವಯವ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

‘ಬೇಕರಿ ತಿನಿಸು ನಿಲ್ಲಿಸಿ, ಬೆರಕೆ ಸೊಪ್ಪು ಬಳಸಿ. ದೇಹಾರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರು ಮುಂದಾಗಬೇಕು. ಮಳೆಯಾಶ್ರಿತ ಸಣ್ಣ ರೈತರಿಗೆ ಸಾವಯವ ಬಿತ್ತನೆಯ ರಾಗಿ ಬೀಜ ವಿತರಿಸಲಾಗುವುದು. ಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆ ಸುಕನ್ಯಾ ಲೇಹ ಮತ್ತು ಅಶ್ವಗಂಧ ಸೇರಿಸಿ ಲೋಹಬಸ್ಮ ತಯಾರಿಸಿಕೊಂಡು, ನಾಟಿ ಹಸುವಿನ ಹಾಲಿನ ಜೊತೆಗೆ ಕುಡಿಸಿದರೆ ಆರೋಗ್ಯವಂತರಾಗುತ್ತಾರೆ. ಭೂಮಿಗೆ ವಿಷಯುಕ್ತ ರಸಗೊಬ್ಬರ ಬಳಸುವುದನ್ನು ನಿಲ್ಲಿಸಿ, ಹಸಿರೆಲೆ, ಕುರಿಮೇಕೆ, ಕೊಟ್ಟಿಗೆ ಗೊಬ್ಬರ ಬಳಸುವುದನ್ನು ರೂಡಿಸಿಕೊಳ್ಳಬೇಕು. ಸಾವಯವ ಆಹಾರ ಪದಾರ್ಥ ಬಳಸಬೇಕು’ ಎಂದು ಸಲಹೆ ನೀಡಿದರು.

ಮಾಗಡಿ ತಾಲ್ಲೂಕಿನಲ್ಲಿ ಸಹಜ ಸಾವಯವ ಬೇಸಾಯ ಪದ್ಧತಿ ರೈತರ ಮನೆ ಮನೆಗೆ ತಲುಪಿಸಲು ಸಂಕಲ್ಪ ಮಾಡಬೇಕೆಂದು ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ತ್ರಿವೇಣಿ ಅಕ್ಕ ತಿಳಿಸಿದರು.

ಇಕ್ರಾ ಸಂಸ್ಥೆ ತಾಲ್ಲೂಕು ಸಂಚಾಲಕ ಕಲ್ಲೆಂಟೆ ಪಾಳ್ಯದ ಬಾಳೆಗೌಡ ಮಾತನಾಡಿ, ಸಾವಯವ ಪದ್ಧತಿ ಆಹಾರ ಸೇವನೆಯಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಜೇನುಕಲ್ಲು ಪಾಳ್ಯದ ಇರುಳಿಗರ ಹಾಡಿಯ ಮುತ್ತಮ್ಮ, ಬರಿಗಯ್ಯ, ಸಿದ್ದೇದೇವರ ಬೆಟ್ಟದ ಹಾಡಿ ಪುಟ್ಟಮಾದಮ್ಮ, ಶಿವಮಲ್ಲಯ್ಯ, ಹಾಲು ಶೆಟ್ಟಹಳ್ಳಿ ಭದ್ರಮ್ಮ, ನಿಂಗಣ್ಣ, ಬೋರೇಗೌಡನ ಪಾಳ್ಯದ ಕೆ.ಗಂಗಾಧರಯ್ಯ, ಜೋಡುಗಟ್ಟೆ ಇರುಳಿಗರ ಹಾಡಿಯ ಶಿವಮ್ಮ, ಮಲ್ಲಮ್ಮ, ಎಸ್‌.ಬ್ಯಾಡರಹಳ್ಳಿ ನಾಗರಾಜು, ಬ್ರಹ್ಮಕುಮಾರ ಗಂಗಾಧರಣ್ಣ, ಬ್ರಹ್ಮಕುಮಾರಿ ಪುಷ್ಪಾ, ರೂಪಾ, ಚಂದ್ರಶೇಖರ್‌ ಸಾವಯವ ಸಹಜ ಕೃಷಿಯ ಬಗ್ಗೆ ಅನುಭವ ಹಂಚಿಕೊಂಡರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !