4

ಡಾ.ಅಜಿತ್ ಹೆಗಡೆಗೆ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ

Published:
Updated:
ಡಾ.ಅಜಿತ್ ಹೆಗಡೆ

ಸೊರಬ: ತಾಲ್ಲೂಕಿನ ಡಾ.ಅಜಿತ್ ಹೆಗಡೆ ಹರೀಶಿ ಅವರ ಕವನ ಸಂಕಲನ ಬಿಳಿಮಲ್ಲಿಗೆಯ ಬಾವುಟ ಸೇರಿದಂತೆ ೯ ಕೃತಿಗಳಿಗೆ ಹಾಸನದ ಮಾಣಿಕ್ಯ ಪ್ರಕಾಶನವು ಕೊಡಮಾಡುವ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.

2016–17ರಲ್ಲಿ ಪ್ರಕಟವಾದ ಕವನ ಸಂಕಲನಗಳಿಗೆ ಈ ಪ್ರಶಸ್ತಿಯನ್ನು ಕೊಡಲಾಗುವುದು. ೨೦೧೬ರ ಸಾಲಿನಲ್ಲಿ 4 ಹಾಗೂ ೨೦೧೭ರ ಸಾಲಿನಲ್ಲಿ ೫ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜುಲೈ 1ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರಕಾಶನವು ಹಮ್ಮಿಕೊಂಡಿರುವ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !