ಅನ್ನದಾಸೋಹಕ್ಕೆ ಶಾಸಕರಿಂದ ಚಾಲನೆ

7

ಅನ್ನದಾಸೋಹಕ್ಕೆ ಶಾಸಕರಿಂದ ಚಾಲನೆ

Published:
Updated:
Deccan Herald

ಮಾಡಬಾಳ್‌(ಮಾಗಡಿ): ಸಾವನದುರ್ಗದ ಲಕ್ಷ್ಮೀನರಸಿಂಹ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎ. ಮಂಜುನಾಥ ತಿಳಿಸಿದರು.

ಶ್ರಾವಣ ಮಾಸದ ಮೊದಲ ಶನಿವಾರ ಲಕ್ಷ್ಮೀನರಸಿಂಹ ಸ್ವಾಮಿ ದೇವರ ದರ್ಶನ ಪಡೆದು, ವ್ಯವಸ್ಥಾಪನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ದಾಸೋಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಂಪೇಗೌಡರ ನಾಡು ಅನ್ನದಾಸೋಹಕ್ಕೆ ಹೆಸರು ವಾಸಿ. ಪುರಾತನ ಕಾಲದಿಂದಲೂ ಹಸಿದು ಬಂದದವರಿಗೆ ಮೊದಲು ಅನ್ನನೀಡುವ ಪದ್ಧತಿ ಇದ್ದ ಬಗ್ಗೆ ಇಂದಿಗೂ ಅರವಟಿಗೆಗಳಿವೆ. ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಪುಣ್ಯಭೂಮಿ ಮಾಗಡಿಯ ಮಣ್ಣಿನ ಮಹತ್ವವನ್ನು ಜಗತ್ತಿಗೆ ಸಾರುವುದರ ಜತೆಗೆ ದಾಸೋಹವನ್ನು ಮುಂದುವರೆಸುವಂತೆ ಭಕ್ತರಿಗೆ ದೀಕ್ಷೆ ನೀಡಿದ್ದಾರೆ ಎಂದರು.

ಮಾಗಡಿಯಲ್ಲಿ ತಿರುವೆಂಗಳ ನಾಥ, ರಂಗನಾಥ ಸ್ವಾಮಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಎರಡು ಕಡೆಗಳಲ್ಲಿ ಉಚಿತ ಭೋಜನ ನೀಡಲಾಗುತ್ತಿದೆ. ಸಾವನದುರ್ಗದಲ್ಲೂ ಇಂದಿನಿಂದ ಉಚಿತ ದಾಸೋಹ ಮುಂದುವರೆಯಲಿದೆ ಎಂದು ಹೇಳಿದರು.

‘ಸಿರಿವಂತ ಭಕ್ತರು ದಾಸೋಹಕ್ಕೆ ಸಹಾಯ ಮಾಡಬಹುದು. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಅವರು ದಾಸೋಹಕ್ಕೆ ಮೊದಲಿಗರಾಗಿ ಸಹಾಯ ಮಾಡಿದ್ದಾರೆ. ನಾವು ದಾಸೋಹಕ್ಕೆ ನೆರವು ನೀಡಿ, ಇಲ್ಲಿ ಬರುವ ಭಕ್ತರು ಹೊಟ್ಟೆತುಂಬ ಊಟ ಮಾಡಿ ಹೋಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿದ್ದೇವೆ. ವೀರಭದ್ರಸ್ವಾಮಿ ದೇಗುಲದಲ್ಲಿ ದಾಸೋಹ ನಡೆಯುತ್ತಿದೆ’ ಎಂದು ತಿಳಿಸಿದರು.

ಲಕ್ಷ್ಮೀ ನರಸಿಂಹ ಸ್ವಾಮಿ ದಾಸೋಹ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ನಾಗರಾಜು ಮೊಗಣ್ಣ ಹೊಸಪೆಟೆ, ಕರಲಮಂಗಲ ರಂಗನಾಥ ಇದ್ದರು. ಭಕ್ತರಿಗೆ ಶಾಸಕರು ದಾಸೋಹ ವಿತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !