ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಪ್ರಶಸ್ತಿ ನನೆಗುದಿಗೆ: ಹಲವರ ಆಕ್ಷೇಪ

Last Updated 16 ನವೆಂಬರ್ 2019, 12:02 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸುಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಈ ವರ್ಷ ಪ್ರಕಟಿಸದೇ ಇರುವ ರಾಜ್ಯ ಸರ್ಕಾರ ನಡೆಗೆಜಿಲ್ಲೆಯ ಹಲವು ಗಣ್ಯರು ಆಕ್ಷೇಪ ವ್ಯಕ್ತಪಡಿಸಿದರು.

ದೇವರಾಜು ಅರಸು ಅವರ ಪ್ರಶಸ್ತಿಯನ್ನು ಆ.20ರಂದೇ ನೀಡಬೇಕಿತ್ತು. ಇದುವರೆಗೂ ಘೋಷಿಸಿಲ್ಲ. ತಕ್ಷಣ ಸಮಿತಿ ರಚಿಸಿ, ಅರ್ಹರಿಗೆ ನೀಡಬೇಕು ಎಂದು ಅಂಕಣಕಾರ ಬಿ.ಚಂದ್ರೇಗೌಡ, ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್, ವಿಧಾನ ಪರಿಷತ್ ಮಾಜಿ ಸದಸ್ಯಜಿ.ಮಾದಪ್ಪ,ಸಮಾಜವಾದಿ ಪಿ.ಪುಟ್ಟಯ್ಯ, ಹೊಳೆಮಡಿಲು ವೆಂಕಟೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ದೇವರಾಜು ಅರಸು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದವರು. ಹಾವನೂರು ಆಯೋಗದ ರಚನೆ ಮಾಡಿ ಹಿಂದುಳಿದವರಿಗೆ ಮೀಸಲಾತಿ ನೀಡಿದವರು. ಇಂತಹ ವ್ಯಕ್ತಿ ನಿರ್ಲಕ್ಷಿಸುತ್ತಿರುವುದು ಹಿಂದುಳಿದ ವರ್ಗಗಳಿಗೆ ಅವಮಾನ ಮಾಡಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರಕಟಿಸಲುನೆರೆ ಹಾವಳಿಯ ಸಬೂಬು ಹೇಳುತ್ತಿದ್ದಾರೆ.ಅದೇ 64ನೇ ರಾಜ್ಯೋತ್ಸವ ಪ್ರಶಸ್ತಿಯನ್ನು 64 ಜನರಿಗೆ ನೀಡಲು ₨ 64 ಲಕ್ಷ ಹೊರೆಯಾಗಲಿಲ್ಲವೇ?ಸುಮಾರು ₨ 10 ಕೋಟಿ ಖರ್ಚು ಮಾಡಿ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದಾರೆ. ದೇವರಾಜ ಅರಸು ಪ್ರಶಸ್ತಿಗೆ ನೀಡಲು ₨ 5 ಲಕ್ಷಕ್ಕೆ ಕಷ್ಟವಾಗಿದೆಯೇ ಎಂದು ಪ್ರಶ್ನಿಸಿದರು.

ಸರ್ಕರಕ್ಕೆ ₹5 ಲಕ್ಷ ನೀಡುವುದು ಕಷ್ಟವಾದರೆಜೋಳಿಗೆ ಹಿಡಿದು ಸಾರ್ವಜನಿಕರಿಂದ ಸಂಗ್ರಹಿಸುತ್ತೇವೆ. ಅರಸು ಕಾಂಗ್ರೆಸ್ ಮುಖಂಡರು ಎನ್ನುವ ಕಾರಣಕ್ಕೆ ಪ್ರಶಸ್ತಿ ಘೋಷಣೆ ಮಾಡದಿರುವುದು ಸರಿಯಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT