ಕೆಂಗಲ್ ಹನುಮಂತಯ್ಯ ಮಗಳಿಂದ ಯುವತಿ ಮೇಲೆ ಹಲ್ಲೆ

7

ಕೆಂಗಲ್ ಹನುಮಂತಯ್ಯ ಮಗಳಿಂದ ಯುವತಿ ಮೇಲೆ ಹಲ್ಲೆ

Published:
Updated:

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮಗಳು ವಿಜಯಲಕ್ಷ್ಮಿ ಅವರು ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ನಡೆದಿದೆ.

ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ನಿವಾಸಿ ವರ್ಷಾ ಹಲ್ಲೆಗೊಳಗಾದವರು. ವಿಜಯಲಕ್ಷ್ಮಿ ಅವರು ಕೆಂಗಲ್ ಗೆ ಸೋಮವಾರ ಸಂಜೆ ಭೇಟಿ ನೀಡಿ ಪೂಜೆ ಮುಗಿಸಿ ಆಂಜನೇಯಸ್ವಾಮಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕುವಾಗ ಈ ಯುವತಿ ಅಡ್ಡಬಂದಳು ಎಂಬ ಕಾರಣಕ್ಕೆ ಹಲ್ಲೆ ನಡೆಸಿದರು ಎಂದು ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೋಮವಾರ ಮಹಾಲಯ ಅಮಾವಾಸ್ಯೆ ಕಾರಣ ಭಕ್ತರು ಹೆಚ್ಚಿದ್ದು, ವಿಜಯಲಕ್ಷ್ಮಿ ಅವರು ದೇವಸ್ಥಾನ ಪ್ರದಕ್ಷಿಣೆ ಹಾಕಲು ಹೋಗಿದ್ದರು. ಯುವತಿಯ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಂದಂತೆ ಬೈದು ಕಾರು ಹತ್ತಿ ಹೋಗುತ್ತಿದ್ದ ವಿಜಯಲಕ್ಷ್ಮಿ ಅವರನ್ನು ಅಡ್ಡಗಟ್ಟಿದ ಸಾರ್ವಜನಿಕರು ಅವರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಕಾರಿಗೆ ಕಲ್ಲಿನಿಂದ ಹೊಡೆದು ಗಾಜು ಪುಡಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ವರ್ಷಾ ಅವರು ಹಲ್ಲೆ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ವಿಜಯಲಕ್ಷ್ಮಿ ವಿರುದ್ಧ ದೂರು ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !