ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಜಿಲ್ಲೆಯಲ್ಲಿ 15.17 ಲಕ್ಷ ಮತದಾರರು 

ಅಂತಿಮ ಮತದಾರರ ಪಟ್ಟಿ ಪೂರ್ವಭಾವಿ ಪರಿಶೀಲನಾ ಸಭೆಯಲ್ಲಿ ಮಾಹಿತಿ
Last Updated 4 ಜನವರಿ 2023, 14:23 IST
ಅಕ್ಷರ ಗಾತ್ರ

ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ 15,17,756 ಮತದಾರರು ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.

ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವ ತಯಾರಿ ಸಿದ್ದತೆ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹೊಸದಾಗಿ 31,560 ಮತದಾರರು ಸೇರ್ಪಡೆಯಾಗಿದ್ದಾರೆ. ಅದರಲ್ಲಿ 15,203 ಪುರುಷರು, 16,349 ಮಹಿಳಾ ಹಾಗೂ 8 ತೃತೀಯ ಲಿಂಗ ಮತದಾರರು ಇದ್ದಾರೆ’ ಎಂದರು.

ಮುಧೋಳ ಕ್ಷೇತ್ರದಲ್ಲಿ 1,95,087 ಮತದಾರರ ಪೈಕಿ 96,196 ಪುರುಷ, 98,890 ಮಹಿಳಾ, ತೇರದಾಳ ಕ್ಷೇತ್ರದಲ್ಲಿ 2,20,974 ಮತದಾರರ ಪೈಕಿ 1,10,529 ಪುರುಷ, 1,10,430 ಮಹಿಳೆ, ಜಮಖಂಡಿ ಮತಕ್ಷೇತ್ರದಲ್ಲಿ 2,08,419 ಮತದಾರರ ಪೈಕಿ 1,04,149 ಪುರುಷ, 1,04,265 ಮಹಿಳಾ ಮತದಾರರು ಇದ್ದಾರೆ.

‘ಬೀಳಗಿ ಕ್ಷೇತ್ರದಲ್ಲಿ 2,23,560 ಮತದಾರರ ಪೈಕಿ 1,11,025 ಪುರುಷ, 1,12,520 ಮಹಿಳಾ, ಬಾದಾಮಿ ಕ್ಷೇತ್ರದಲ್ಲಿ 2,16,593 ಮತದಾರರ ಪೈಕಿ 1,09,402 ಪುರುಷ, 1,07,176 ಮಹಿಳಾ, ಬಾಗಲಕೋಟೆ ಕ್ಷೇತ್ರದಲ್ಲಿ 2,36,025 ಮತದಾರರ ಪೈಕಿ 1,17,534 ಪುರುಷ, 1,18,474 ಮಹಿಳಾ, ಹುನಗುಂದ ಕ್ಷೇತ್ರದಲ್ಲಿ 2,17,098 ಮತದಾರರ ಪೈಕಿ 1,08,492 ಪುರುಷ ಹಾಗೂ 1,08,594 ಮಹಿಳಾ ಮತದಾರರಿದ್ದಾರೆ’ ಎಂದು ತಿಳಿಸಿದರು.

ತೇರದಾಳ ಮತ್ತು ಬಾದಾಮಿ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿಗೆ ಇದ್ದಾರೆ. ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಆಕ್ಷೇಪಣೆ, ಸಲಹೆಗಳನ್ನು ಪಡೆಯಲಾಯಿತು.

ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT