ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಬಿಸಿಯೂಟದ ಕೊಠಡಿಗಳಿಗೆ ಬೇಕಿದೆ ಕಾಯಕಲ್ಪ

ಅಡುಗೆ ಕೊಠಡಿಗಳ ಸಾಮಾಜಿಕ ಪರಿಶೋಧನೆ
Last Updated 26 ನವೆಂಬರ್ 2022, 6:03 IST
ಅಕ್ಷರ ಗಾತ್ರ

ಬಾಗಲಕೋಟೆ: ಅಕ್ಷರ ದಾಸೋಹ ಯೋಜನೆಯ ಅಡುಗೆ ಕೊಠಡಿ, ಆಹಾರ ಗುಣಮಟ್ಟ, ಉತ್ತಮ ಆಹಾರ ತಯಾರಿಕೆ, ಪೌಷ್ಟಿಕಾಂಶ ಆಹಾರ ಹಂಚಿಕೆ ಮುಂತಾದ ವಿಷಯಗಳಲ್ಲಿ ಲೋಪ ಇರುವುದು ಸಾಮಾಜಿಕ ಪರಿಶೋಧನೆ ವರದಿಯಲ್ಲಿ ಪತ್ತೆಯಾಗಿದೆ.

‘ಕಳಪೆ ಬಿಸಿಯೂಟ ವಿತರಣೆ, ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ, ಆಹಾರಧಾನ್ಯ ಸರಬರಾಜು ಸರಿಯಿಲ್ಲ’ ಎಂಬಿತ್ಯಾದಿ ದೂರುಗಳನ್ನು ತಪ್ಪಿಸಲು ಎಸ್‌.ಡಿ.ಎಂ.ಸಿ. ಸದಸ್ಯರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಪೋಷಕ ಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ಸೌಲಭ್ಯಗಳ ಪರಿಶೀಲಿಸಿದ್ದು, ಅತ್ಯುತ್ತಮ, ಉತ್ತಮ, ಸಾಧಾರಣ ಗ್ರೇಡ್‌ ನೀಡಲಾಗಿದೆ.

ಸಾಮಾಜಿಕ ಪರಿಶೋಧನೆ ಸಮಿತಿಯು 22 ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸರ್ವೆ ನಡೆಸಿದೆ. ಅದರಲ್ಲಿ ಸಾಕಷ್ಟು ಕೊಠಡಿಗಳು ಅತ್ಯುತ್ತಮವಾಗಿರುವುದು ಕಂಡು ಬಂದಿದೆ. ಉತ್ತಮ ಹಾಗೂ ಸಾಧಾರಣ ಪಟ್ಟಿಯಲ್ಲಿರುವುಗಳ ಸುಧಾರಣೆಗೂ ಅವಕಾಶ ಲಭಿಸಿದೆ.

ಅಡುಗೆ ಮಾಡುವವರ, ಬಡಿಸುವವರ ಶುಚಿತ್ವ, ತಲೆಗವಸು ಧರಿಸಿರುವುದು, ಅಡುಗೆ ಮನೆ ಗಾಳಿ, ಬೆಳಕಿನಿಂದ ಕೂಡಿದೆಯೇ?ಛಾವಣಿ ಮೇಲೆ ಹಲ್ಲಿ, ಹುಳು ಇಲ್ಲದಿರುವುದು ಶುದ್ಧ ನೀರು ಬಳಕೆ ಸೇರಿದಂತೆ ಎಂಟು ಪ್ರಶ್ನೆಗಳಿಗೆ 3,558 ಅತ್ಯುತ್ತಮ, 1,807 ಉತ್ತಮ ಹಾಗೂ 275 ಸಾಧಾರಣ ಸೌಲಭ್ಯ ಹೊಂದಿರುವುದು ಪತ್ತೆಯಾಗಿದೆ.

ದಾಸ್ತಾನು ಕೊಠಡಿ ಸ್ವಚ್ಛತೆ, ತರಕಾರಿ ಶುಚಿಯಾದ ಸ್ಥಳದಲ್ಲಿರಿಸುವ ವಿಷಯದಲ್ಲಿ 2,549 ಕೊಠಡಿಗಳಿಗೆ ಅತ್ಯುತ್ತಮ, 445 ಉತ್ತಮ, 563 ಸಾಧಾರಣ ಸೌಲಭ್ಯ ಹೊಂದಿವೆ.

ಗುಣಮಟ್ಟದ ಆಹಾರ ಮತ್ತು ಪ್ರಮಾಣ ವಿಷಯದಲ್ಲಿ 2,647 ಅತ್ಯುತ್ತಮ, 1,286 ಉತ್ತಮ ಹಾಗೂ 57 ಸಾಧಾರಣ ಗ್ರೇಡ್‌ ಪಡೆದಿವೆ.

ಆಹಾರ ಪದಾರ್ಥ ಸ್ವಚ್ಛತೆ,ವಿದ್ಯಾರ್ಥಿಗಳ ಸೇವನೆಗೆ ಮುಂಚೆ ಶಿಕ್ಷಕರಿಬ್ಬರು ರುಚಿ ನೋಡುತ್ತಾರೆಯೇ ಮುಂತಾದ ವಿಷಯಗಳಲ್ಲಿ 5,585 ಅತ್ಯುತ್ತಮ, 625 ಉತ್ತಮ ಹಾಗೂ 131 ಸಾಧಾರಣ, ಹಾಲನ್ನು ಹದವಾಗಿ ಕಾಯಿಸಲಾಗುತ್ತಿದೆಯೇ? ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ನಿಗದಿತ ದಿನದಂದು ವಿತರಿಸಲಾಗುತ್ತಿದೆಯೇ ಎಂಬ ವಿಷಯದಲ್ಲಿ 3,734 ಅತ್ಯುತ್ತಮ, 522 ಉತ್ತಮ ಹಾಗೂ 93 ಸಾಧಾರಣ ಗ್ರೇಡ್‌ ಪಡೆದುಕೊಂಡಿವೆ.

ಅಗ್ನಿ ಅವಘಡ ತಡೆಯುವ ಸಾಮಗ್ರಿಗಳ ಕಾರ್ಯ ನಿರ್ವಹಣೆ ವಿಷಯದಲ್ಲಿ 1,062 ಅತ್ಯುತ್ತಮ, 190 ಉತ್ತಮ, 51 ಸಾಧಾರಣ,ತ್ಯಾಜ್ಯ ವಿಲೇವಾರಿಯಲ್ಲಿ 776 ಅತ್ಯುತ್ತಮ, 272 ಉತ್ತಮ ಹಾಗೂ 83 ಸಾಧಾರಣ ಸ್ಥಾನ ಗಳಿಸಿವೆ.

ಕೊಠಡಿಗಳ ದುರಸ್ತಿಗೆ, ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ, ಸಮುದಾಯದ ನೆರವು ಪಡೆಯಬೇಕು. ಅಡುಗೆ ಕೊಠಡಿ ಒಳಗೆ, ಸುತ್ತ ಸ್ವಚ್ಛತೆ ಕಾಪಾಡಬೇಕು ಎಂದು ಸಮಿತಿ ಸಲಹೆ ಮಾಡಿದೆ ಎಂದು ಅಕ್ಷರ ದಾಸೋಹ ಯೋಜನೆಯ ಯೋಜನಾಧಿಕಾರಿ ಅಶೋಕ ಬಸಣ್ಣವರ ‘ಪ್ರಜಾವಾಣಿ‘ಗೆ ತಿಳಿಸಿದರು.

ಆಹಾರ ಧಾನ್ಯಗಳ ಬಳಕೆ, ಹಾಲು ಕಾಯಿಸುವ, ಸುರಕ್ಷತೆಯ ಬಗ್ಗೆ, ತ್ಯಾಜ್ಯ ವಿಲೇವಾರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

*
ರಾಜ್ಯಕ್ಕೆ ಸಾಮಾಜಿಕ ಪರಿಶೋಧನೆಯ ವರದಿ ನೀಡಲಾಗಿದೆ. ಸರ್ಕಾರ ನೀಡುವ ಸೂಚನೆಯನ್ವಯ ಕ್ರಮ ಕೈಗೊಳ್ಳಲಾಗುವುದು
-ಅಶೋಕ ಬಸವಣ್ಣವರ, ಯೋಜನಾಧಿಕಾರಿ, ಅಕ್ಷರ ದಾಸೋಹ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT