12 ಸ್ಥಳೀಯ ಸಂಸ್ಥೆ: 312 ಸ್ಥಾನ, 1573 ನಾಮಪತ್ರ

7
ಜಮಖಂಡಿ ನಗರಸಭೆ: ಅತಿಹೆಚ್ಚು ನಾಮಪತ್ರ ಸಲ್ಲಿಕೆ, ಬೀಳಗಿ ಪಟ್ಟಣ ಪಂಚಾಯ್ತಿ; ಅತ್ಯಂತ ಕಡಿಮೆ

12 ಸ್ಥಳೀಯ ಸಂಸ್ಥೆ: 312 ಸ್ಥಾನ, 1573 ನಾಮಪತ್ರ

Published:
Updated:

ಬಾಗಲಕೋಟೆ: ಆಗಸ್ಟ್ 30ರಂದು ಮತದಾನ ನಡೆಯಲಿರುವ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳ 312 ಸ್ಥಾನಗಳಿಗೆ 1573 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಂಐಎಂಐಎಂ, ಶಿವಸೇನಾ. ಬಿಎಸ್‌ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಅದೃಷ್ಟ ಪಣಕ್ಕಿಡಲು ಮುಂದಾಗಿದ್ದಾರೆ.

ಆಗಸ್ಟ್ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ ಒಂದೇ ದಿನ 1148 ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಅದರಲ್ಲಿ ಜಮಖಂಡಿ ನಗರಸಭೆಯ 31 ಸ್ಥಾನಗಳಿಗೆ 258 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬೀಳಗಿ ಪಟ್ಟಣಪಂಚಾಯ್ತಿಯ 18 ಸ್ಥಾನಗಳಿಗೆ 56 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇಳಕಲ್ ನಗರಸಭೆಯ 31 ಸ್ಥಾನಗಳಿಗೆ 219 ನಾಮಪತ್ರ ಸಲ್ಲಿಕೆಯಾಗಿದ್ದು, ಕೊನೆಯ ದಿನವೇ 168 ಮಂದಿ ಸಲ್ಲಿಸಿದ್ದಾರೆ. ಜಮಖಂಡಿ, ಇಳಕಲ್ ನಗರಸಭೆಗಳಲ್ಲಿ ಬಿರುಸಿನ ಹಣಾಹಣಿ ಏರ್ಪಟ್ಟಿದೆ.

ಬಾಗಲಕೋಟೆ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಸಹಜವಾಗಿಯೇ ಆ ಪಕ್ಷದಿಂದ ನಾಮಪತ್ರ ಸಲ್ಲಿಸಿದವರ ಸಂಖ್ಯೆಯೇ ಹೆಚ್ಚಾಗಿದೆ. ಬಾದಾಮಿ ಹಾಗೂ ಜಮಖಂಡಿಯಲ್ಲಿ ಕಾಂಗ್ರೆಸ್‌ ಪಕ್ಷದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಾಗಲಕೋಟೆಯ 35 ಸ್ಥಾನಗಳಿಗೆ ಬಿಜೆಪಿಯ 37 ಮಂದಿ ನಾಮಪತ್ರ ಸಲ್ಲಿಸಿದ್ದು, ಪಕ್ಷದಿಂದ ‘ಬಿ’ಫಾರಂ ಪಡೆದಿರುವ 35 ಮಂದಿ ನಾಮಪತ್ರ ಪರಿಶೀಲನೆ ವೇಳೆ ಅಂತಿಮಗೊಳ್ಳಲಿದ್ದಾರೆ. ಕಾಂಗ್ರೆಸ್‌ನಿಂದ 36 ಮಂದಿ, ಜೆಡಿಸ್‌ನಿಂದ 13, ಪ್ರಜಾ ಪರಿವರ್ತನಾ ಪಕ್ಷದಿಂದ ಇಬ್ಬರು, ಎಂಐಎಂಐಎಂನಿಂದ ಒಬ್ಬರು ಹಾಗೂ ಪಕ್ಷೇತರರು 24 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಮುಧೋಳದಲ್ಲಿ ಕಾಂಗ್ರೆಸ್‌ನಿಂದ 55, ಬಿಜೆಪಿಯಿಂದ 74, ಜೆಡಿಎಸ್ ಹಾಗೂ ಪಕ್ಷೇತರರು ತಲಾ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಜಮಖಂಡಿಯಲ್ಲಿ ಕಾಂಗ್ರೆಸ್‌ನಿಂದ 98, ಬಿಜೆಪಿ 89, ಜೆಡಿಎಸ್ 14, ಪ್ರಜಾ ಪರಿವರ್ತನಾ ಪಕ್ಷದಿಂದ ಆರು, ಎಂಐಎಂಐಎಂ ಐದು, ಶಿವಸೇನಾ ಒಬ್ಬರು ಹಾಗೂ ಪಕ್ಷೇತರರು 45 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇಳಕಲ್ ನಗರಸಭೆಗೆ ಕಾಂಗ್ರೆಸ್‌ನಿಂದ 39, ಬಿಜೆಪಿಯಿಂದ 96, ಜೆಡಿಎಸ್‌ 25, ಎಂಐಎಂಐಎಂನಿಂದ ಐವರು ಹಾಗೂ ಪಕ್ಷೇತರರು 54,  ರಬಕವಿ–ಬನಹಟ್ಟಿಯಲ್ಲಿ ಕಾಂಗ್ರೆಸ್‌ನಿಂದ 49, ಬಿಜೆಪಿ 76, ಜೆಡಿಎಸ್ 12 ಹಾಗೂ ಪಕ್ಷೇತರರು 22  ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಬಾದಾಮಿ ಪುರಸಭೆಗೆ ಕಾಂಗ್ರೆಸ್‌ನಿಂದ 34, ಬಿಜೆಪಿಯಿಂದ 24, ಜೆಡಿಎಸ್ 22, ಪಕ್ಷೇತರರು 28, ಮಹಾಲಿಂಗಪುರ ಪುರಸಭೆಗೆ ಕಾಂಗ್ರೆಸ್‌ನಿಂದ 45, ಬಿಜೆಪಿ 28, ಜೆಡಿಎಸ್ 18, ಪಕ್ಷೇತರ 14, ಹುನಗುಂದ ಪುರಸಭೆ ಕಾಂಗ್ರೆಸ್‌ನಿಂದ 33, ಬಿಜೆಪಿ 37, ಜೆಡಿಎಸ್ 10 ಹಾಗೂ 16 ಮಂದಿ ಪಕ್ಷೇತರ, ಗುಳೇದಗುಡ್ಡ ಕಾಂಗ್ರೆಸ್‌ನಿಂದ 41, ಬಿಜೆಪಿ 22, ಜೆಡಿಎಸ್ 24, ಪಕ್ಷೇತರ 13, ತೇರದಾಳ ಪುರಸಭೆ ಕಾಂಗ್ರೆಸ್‌ನಿಂದ 123, ಬಿಜೆಪಿ 26, ಜೆಡಿಎಸ್ 55, ಪ್ರಜಾಪರಿವರ್ತನಾ ಪಕ್ಷದಿಂದ 18 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 

ಬೀಳಗಿ ಪಟ್ಟಣ ಪಂಚಾಯ್ತಿಗೆ 58 ಮಂದಿ, ಕೆರೂರ ಪಟ್ಟಣ ಪಂಚಾಯ್ತಿಗೆ ಕಾಂಗ್ರೆಸ್‌ನಿಂದ 24, ಬಿಜೆಪಿ 15, ಜೆಡಿಎಸ್ 10, ಬಿಎಸ್‌ಪಿಯಿಂದ ಒಬ್ಬರು ಹಾಗೂ ಪಕ್ಷೇತರರು 33 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !