ಬಾಗಲಕೋಟೆ: ಶ್ರವಣದೋಷವುಳ್ಳವರ ರಾಜ್ಯಮಟ್ಟದ 14ನೇ ಕ್ರೀಡಾಕೂಟದಲ್ಲಿ 173 ಅಂಕಗಳನ್ನು ಗಳಿಸುವ ಮೂಲಕ ಮೈಸೂರು ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಕರ್ನಾಟಕ ಶ್ರವಣದೋಷವುಳ್ಳವರ ಕ್ರೀಡಾ ಒಕ್ಕೂಟ, ಬಾಗಲಕೋಟೆ ಜಿಲ್ಲಾ ಶ್ರವಣದೋಷವುಳ್ಳವರ ಸಂಘದ ಸಹಯೋಗದಲ್ಲಿ ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ 103 ಅಂಕಗಳನ್ನು ಗಳಿಸಿದ ಬೆಂಗಳೂರು ತಂಡ ದ್ವಿತೀಯ ಸ್ಥಾನ ಹಾಗೂ 64 ಅಂಕಗಳನ್ನು ಪಡೆದ ಮಂಡ್ಯ ಜಿಲ್ಲೆ ಕ್ರೀಡಾಪಟುಗಳು ತೃತೀಯ ಸ್ಥಾನ ಪಡೆದರು.