ಗುರುವಾರ , ಆಗಸ್ಟ್ 6, 2020
24 °C

ಬಾಗಲಕೋಟೆ: 28 ಮಂದಿ ಆಸ್ಪತ್ರೆಯಿಂದ ಬಿಡುಗಡೆ, ಎರಡು ದಿನಗಳಲ್ಲಿ 61 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಾಗಲಕೋಟೆ: ಜಿಲ್ಲೆಯಲ್ಲಿ 28 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದು, ಭಾನುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅದರ ಜತೆಗೆ ಗುಣಮುಖರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಒಟ್ಟು 61 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಗುಣಮುಖರಾದವರ ಪೈಕಿ ಕಲಾದಗಿ ಗ್ರಾಮದ 17, ಬಾದಾಮಿ ಆರು, ಮುಧೋಳ ಎರಡು, ಜಮಖಂಡಿ, ಬಾಗಲಕೋಟೆ ತಾಲ್ಲೂಕಿನ ಮುಡಪಲಜೀವಿ, ಬೀಳಗಿ ತಾಲ್ಲೂಕಿನ ಗಲಗಲಿಯ ತಲಾ ಒಬ್ಬರು ಸೇರಿದ್ದಾರೆ.

ಕಲಾದಗಿ ಗ್ರಾಮದ 10 ವರ್ಷದ ಬಾಲಕ , ಐದು ವರ್ಷದ ಬಾಲಕಿ, 11 ವರ್ಷದ ಬಾಲಕಿ, 10 ವರ್ಷದ ಬಾಲಕಿ, ಬಾದಾಮಿಯ 10 ವರ್ಷದ ಬಾಲಕ, ನಾಲ್ಕು ವರ್ಷದ ಬಾಲಕ, 27 ವರ್ಷದ ಯುವಕ, 26 ವರ್ಷದ ಯುವತಿ, ಕಲಾದಗಿಯ 35 ವರ್ಷದ ಮಹಿಳೆ, 15 ವರ್ಷದ ಬಾಲಕಿ, 40 ವರ್ಷದ ಪುರುಷ, ಬಾದಾಮಿಯ 25 ವರ್ಷದ ಯುವತಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಜಮಖಂಡಿಯ 42 ವರ್ಷದ ಪುರುಷ, ಬಾಗಲಕೋಟೆ ತಾಲ್ಲೂಕಿನ ಮುಡಪಲಜೀವಿಯ 38 ವರ್ಷದ ಮಹಿಳೆ, ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದ 13 ವರ್ಷದ ಬಾಲಕ, ಕಲಾದಗಿ ಗ್ರಾಮದ 37 ವರ್ಷದ ಪುರುಷ , ಮುಧೋಳದ 57 ವರ್ಷದ ಪುರುಷ, ಕಲಾದಗಿ ಗ್ರಾಮದ 28 ವರ್ಷದ ಯುವತಿ, ಮುಧೋಳ ತಾಲ್ಲೂಕಿನ ಮುಗಳಖೋಡದ 29 ವರ್ಷದ ಯುವಕ, ಬಾದಾಮಿಯ 79 ವರ್ಷದ ವೃದ್ಧ ಗುಣಮುಖರಾಗಿದ್ದಾರೆ.

ಕಲಾದಗಿ ಗ್ರಾಮದ 51 ವರ್ಷದ ಪುರುಷ, 45 ವರ್ಷದ ಮಹಿಳೆ, 24 ವರ್ಷದ ಯುವತಿ, 32 ವರ್ಷದ ಮಹಿಳೆ, 27 ವರ್ಷದ ಯುವಕ, 44 ವರ್ಷದ ಪುರುಷ ಹಾಗೂ 25 ವರ್ಷದ ಯುವತಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಔಷಧ ಮತ್ತು ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆಯ ಸಿಬ್ಬಂದಿ ಕೈಗಳಿಗೆ ಸೀಲ್ ಹಾಕಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು