ರಾಂಪುರ: ಸಮೀಪದ ಮನ್ನಿಕಟ್ಟಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಮಳೆಗಾಗಿ ಪ್ರಾರ್ಥಿಸಿ ಮೂರ್ನಾಲ್ಕು ದಿನಗಳಿಂದ ವಿವಿಧ ರೀತಿಯಲ್ಲಿ ಪ್ರಾರ್ಥನೆ, ಪೂಜೆ ನಡೆಯುತ್ತಿವೆ.
ಗ್ರಾಮದ ಮಕ್ಕಳು ಮಣ್ಣಿನ ಗೊಂಬೆ ಮಾಡಿ ಮನೆ ಮನೆ ತಿರುಗಿ ಪೂಜೆ ಮಾಡಿಸುವುದು, ಮಹಿಳೆಯರು ವರುಣದೇವ ಕೃಪೆ ತೋರು ಎಂದು ಹಾಡುಗಳನ್ನು ಹೇಳುತ್ತ ನೃತ್ಯ ಮಾಡುವುದು, ಗುರ್ಜಿ ಹಾಕಿ ಮನೆ ಮನೆಗೆ ತೆರಳಿ ದವಸ ಧಾನ್ಯ ಸಂಗ್ರಹಿಸಿ ಮಳೆರಾಯನ ಪ್ರಾರ್ಥನೆ ಮಾಡುತ್ತಿದ್ದಾರೆ.
ಭಾನುವಾರದವರೆಗೂ ಅನೇಕ ರೀತಿಯ ಪೂಜೆಗಳನ್ನು ನೆರವೇರಿಸುವ ಮೂಲಕ ಮಳೆರಾಯನನ್ನು ಪ್ರಾರ್ಥಿಸುತ್ತಾರೆ. ಸಂಗ್ರಹಿಸಿದ ಧಾನ್ಯಗಳಿಂದ ಸೋಮವಾರ ಪ್ರಸಾದ ಮಾಡಿ ದೇವರುಗಳಿಗೆ ನೈವೇದ್ಯ ಸಮರ್ಪಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.