ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಲಾಭ ತರುತ್ತಿರುವ ಮಿಶ್ರ ಬೆಳೆ ಕೃಷಿ; ರೈತ ನಿಂಗಪ್ಪ ಕುರಿ ಸಾಧನೆ

ಎಚ್.ಎಸ್. ಘಂಟಿ
Published : 16 ಆಗಸ್ಟ್ 2024, 4:42 IST
Last Updated : 16 ಆಗಸ್ಟ್ 2024, 4:42 IST
ಫಾಲೋ ಮಾಡಿ
Comments

ಗುಳೇದಗುಡ್ಡ: ತಾಲ್ಲೂಕಿನ ಕಟಗಿನಹಳ್ಳಿ ಗ್ರಾಮದ ರೈತ ನಿಂಗಪ್ಪ ಕುರಿ ಏಳು ಎಕರೆ ಜಮೀನಿನಲ್ಲಿ ಸಾವಯವ ಸಮಗ್ರ ಕೃಷಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವಲ್ಲಿ ಭಿನ್ನ ಕ್ರಮ ಅನುಸರಿಸಿ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ.

ಏಳನೇ ತರಗತಿ ಓದಿರುವ ಇವರು, ತಂದೆ ಲಕ್ಷ್ಮಣ ಅವರ ನಿಧನದ ನಂತರ ಕೃಷಿ ಕಾಯಕದ ಜವಾಬ್ದಾರಿ ಹೊತ್ತರು. ಸಣ್ಣ ವಯಸ್ಸಿನಲ್ಲೇ ಕೃಷಿಕರಾದ ಇವರು ಇತರರಿಗೆ ಮಾದರಿ ಎನಿಸಿದ್ದಾರೆ.

ತಮ್ಮ ಹೊಲದಲ್ಲಿಯೇ ಕೃಷಿಗೆ ಸಂಬಂಧಿಸಿದ ಜ್ಞಾನ ಪಡೆದು, ಕೃಷಿ ಇಲಾಖೆಯ ಹಲವು ತರಬೇತಿಗಳನ್ನೂ ಪಡೆದು ಉತ್ತಮ ಫಸಲು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊಲದಲ್ಲಿಯೇ ಮನೆ ನಿರ್ಮಾಣ ಮಾಡಿಕೊಂಡು ಕುಟುಂಬದ ಸದಸ್ಯರೆಲ್ಲರೂ ಕೃಷಿ ಕೆಲಸ ಮಾಡುವ ಮೂಲಕ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.

ಜಮೀನಿನಲ್ಲಿ ಕಬ್ಬು, ಬಾಳೆ, ಹೀರೆಕಾಯಿ, ಸೌತೆ ,ಬದನೆ, ಚೆಂಡು ಹೂ, ಮಾವು, ನುಗ್ಗೆ, ಮೆಣಸು, ಜೋಳ ಮುಂತಾದವನ್ನು ಬೆಳೆಯುತ್ತಾರೆ. ತೋಟಗಾರಿಕೆ ಬೆಳೆಯಾಗಿ ಲಿಂಬೆ, ಚಿಕ್ಕು, ಮಾವು, ಸಪೋಟಾ, ಸೀಬೆ, ನುಗ್ಗೆ, ಕರಿಬೇವು ಜೊತೆಗೆ ಹೊಲದ ಬದುವಿನಲ್ಲಿ ತೆಂಗು, ತೇಗ, ಬೇವು ಮರಗಳನ್ನು ಬೆಳೆದಿದ್ದಾರೆ.

ಕೊಟ್ಟಿಗೆ ಗೊಬ್ಬರ ಬಳಕೆ: ಮಣ್ಣಿನ ಫಲವತ್ತತೆಗಾಗಿ ಎಲ್ಲ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಕೋಳಿ, ಕುರಿ, ಮೇಕೆ ಗೊಬ್ಬರ ಬಳಸುತ್ತಾರೆ. ಎಮ್ಮೆ ಆಕಳುಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಸಗಣಿಯನ್ನು ತಿಪ್ಪೆಯಲ್ಲಿ ಹಾಕಿ 6 ತಿಂಗಳಿಗೊಮ್ಮೆ ಬೆಳೆಗಳಿಗೆ ಬಳಸುತ್ತಿದ್ದಾರೆ.

ಮಲಪ್ರಭಾ ನದಿ ನೀರು ಬಳಕೆ: ಇವರ ಜಮೀನಿನ ಸಮೀಪ ಮಲಪ್ರಭಾ ನದಿ ಹರಿದಿರುವುದರಿಂದ ಪಂಪಸೆಟ್‌ ಕೂಡಿಸುವ ಮೂಲಕ ಅದರ ನೀರನ್ನು ಬಳಸಿ ಬೆಳೆ ತೆಗೆಯುತ್ತಾರೆ.

ಸೋಲಾರ್‌ ಟ್ರ್ಯಾಪ್: ಹುಳುಗಳ ಕಾಟ ಹೆಚ್ಚಾದರೆ ನಿಯಂತ್ರಣಕ್ಕೆ ಸೋಲಾರ್‌ ಟ್ರ್ಯಾಪ್ ಬಳಸುತ್ತಿದ್ದಾರೆ. ಹಲವು ತರಕಾರಿ, ಇತರ ಬೆಳೆಗಳಿಗೂ ಇದು ಅನುಕೂಲವಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಇವರ ಕೃಷಿ ಸಾಧನೆ ಗುರುತಿಸಿ ಗೌರವಿಸಿವೆ.

ರೈತ ನಿಂಗಪ್ಪ ಕುರಿ
ರೈತ ನಿಂಗಪ್ಪ ಕುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT