ಇಳಕಲ್: ಇಲ್ಲಿಯ ಸೈಯ್ಯದ್ ಷಾ ಮುರ್ತುಜಾ ಖಾದ್ರಿ ದರ್ಗಾ ಖಾತೆಗೆ ಜಮೆಯಾಗಬೇಕಿದ್ದ ₹27.42 ಲಕ್ಷ ವನ್ನು ಅಧ್ಯಕ್ಷರಾಗಿದ್ದ ಉಸ್ಮಾನಗಣಿ ಹುಮನಾಬಾದ ಅವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಮ್ಮದ್ ರಫೀಕ್ ನದಾಫ್ ಎಂಬುವವರು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2011ರಲ್ಲಿ ರಾಷ್ಟ್ರೀಯ ಹೆದ್ದಾರಿ 50ರ ನಿರ್ಮಾಣಕ್ಕಾಗಿ ದರ್ಗಾಕ್ಕೆ ಸೇರಿದ ಜಾಗವನ್ನು ಭೂಸ್ವಾದೀನ ಮಾಡಿಕೊಂಡು ₹27.42 ಲಕ್ಷ ಪರಿಹಾರ ಮಂಜೂರು ಮಾಡಿತ್ತು. ಈ ಮೊತ್ತವನ್ನು ದರ್ಗಾದ ಖಾತೆಗೆ ಜಮೆ ಮಾಡದೇ ಉಸ್ಮಾನಗಣಿ ಹುಮನಾಬಾದ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಅಲ್ಲದೇ ದರ್ಗಾಕ್ಕೆ ಸೇರಿದ ₹15 ಲಕ್ಷ ಠೇವಣಿ ದುರುಪಯೋಗವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಉಸ್ಮಾನಗಣಿ ಅವರ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡುವಂತೆ ಮಹಮ್ಮದ್ ರಫೀಕ್ ನದಾಫ್ ಅವರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಸೂಚನೆಯಂತೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.