ರಬಕವಿ ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಾಬಾಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಶ‍್ರೀಶೈಲ ತೇಲಿ ಅವಿರೋಧವಾಗಿ ಆಯ್ಕೆಗೊಂಡರು.
ಈಚೆಗೆ ಸಂಘದ ಕಾರ್ಯಾಲಯದಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಪಾಟೀಲ ಮತ್ತು ತೇಲಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಬಾಬಾಗೌಡ ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ, ರೈತರ, ಕೂಲಿಕಾರರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಸಂಘದಲ್ಲಿ ಪಾರದರ್ಶಕ ಮತ್ತು ಪಕ್ಷಾತೀತವಾಗಿ ಆಡಳಿತ ನಡೆಸಲಾಗುವುದು. ಗ್ರಾಮೀಣ ಜನರ ಅಭಿವೃದ್ಧಿಗಾಗಿ ಉತ್ತಮ ಆಡಳಿತ ನೀಡಲಾಗುವುದದು. ನಮ್ಮ ಗೆಲವಿಗೆ ಶಾಸಕ ಸಿದ್ದು ಸವದಿ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಯಮನಪ್ಪ ಪದ್ದಿ, ರವಿ ಗಾಯಕವಾಡ, ರಾಮಪ್ಪ ತಮದಡ್ಡಿ, ವಿಜಯ ಕೊಕಟನೂರ, ಸಾತಪ್ಪ ಧೂಪದಾಳ, ನೀಲವ್ವ ಮಠಪತಿ, ಗುಂಡಪ್ಪ ಮಹಾರ, ಪಾಂಡು ಕೋಲಿ, ಭಾರತಿ ಸಣ್ಣಕ್ಕಿ, ವೀರೂಪಾಕ್ಷಯ್ಯ ಡುಮಕಿಮಠ, ಮುತ್ತು ಶಿರಹಟ್ಟಿ, ರಾಜು ಮಠದ. ಸುರೇಶ ಅಕ್ಕಿವಾಟ, ಆನಂದ ಕಂಪು, ವರ್ಧಮಾನ ಕೋರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.