ಬಾದಾಮಿ: ಕೃಷಿ ಪರಿಕರ ಮಾರಾಟ ಗಾರರ ಸಂಘದ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ತಹಶೀಲ್ದಾರಿಗೆ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಚನ್ನಪ್ಪ ಪಟ್ಟಣದ ಮನವಿ ಸಲ್ಲಿಸಿ ಒತ್ತಾಯಿಸಿದರು.

ಅಖಿಲ ಭಾರತ ಕೃಷಿ ಪರಿಕರ ಮಾರಾಟಗಾರರ ಸಂಘದ ನಿರ್ದೇಶನ ದಂತೆ ಸೋಮವಾರ ತಾಲ್ಲೂಕು ಘಟಕದ ಸಂಘದ ಸದಸ್ಯರು ಒಂದು ದಿನ ಸಾಂಕೇತಿಕವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಡಿಎಪಿ ಮತ್ತು ಯೂರಿಯಾ ಜೊತೆಗೆ ಒತ್ತಾಯವಾಗಿ ಬೇರೆ ಉತ್ಪಾದನೆಯನ್ನು ಲಿಂಕ್ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ರಸಗೊಬ್ಬರದ ಬೆಲೆ ಮೇಲೆ ಶೇ 8 ರಷ್ಟು ಡೀಲರ್ಗೆ ಲಾಭಾಂಶ ಇರುವ ಹಾಗೇ ನೋಡಿಕೊಳ್ಳಬೇಕು. ಗೊಬ್ಬರ, ಬೀಜ, ಕೀಟ ನಾಶಕಗಳು ಕಳಪೆ ಬಂದಾಗ ಕಂಪನಿಯವರ ಮೇಲೆ ಪ್ರಕರಣ ದಾಖಲಿಸಿ ಡೀಲರ್ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಅಧಿಕಾರಿಗಳು ತಪಾಸಣೆಗೆ ಬಂದಾಗ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡುವಾಗ ದಾಳಿ ಎನ್ನುವ ಪದದ ಬದಲಾಗಿ ತಪಾಸಣೆ ಎನ್ನಬೇಕು. ಅಂಗಡಿಗಳ ಭಾವಚಿತ್ರಗಳನ್ನು ಬಳಸ ಬಾರದು ಎಂದು ಆಗ್ರಹಿಸಿದರು.

ಪಿ.ಬಿ.ಚವ್ಹಾಣ, ಫಕೀರಪ್ಪ ಬಾಣದ, ಯಲ್ಲಪ್ಪ ಅಮರನ್ನವರ, ಸೋಮಲಿಂಗಪ್ಪ, ಸತೀಶ ಹೆಬ್ಬಳ್ಳಿ ಮಾರಾಟಗಾರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-19-2055157282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.