ಬಾದಾಮಿ: ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರ ಆದಿಶಕ್ತಿ ಬನಶಂಕರಿದೇವಿ ಅವತರಿಸಿದ ದಿನವನ್ನು ಭಕ್ತರು ಶ್ರದ್ಧೆ ಭಕ್ತಿಯಿಂದ ದೇವಿಯ ದರ್ಶನ ಪಡೆದು ಸಂಭ್ರಮಿಸಿದರು.

ಬಾದಮಿ ಆಮಾವಾಸ್ಯೆ ವೈಶಾಖ ಬಹುಳ ಚತುರ್ದಶಿಯಂದು ಬನಶಂಕರಿದೇವಿ ಅವತರಿಸಿದ ದಿನದ ಅಂಗವಾಗಿ ಶುಕ್ರವಾರ ಅರ್ಚಕರು ದೇವಿ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಿದ್ದರು.

ಬೆಳಿಗ್ಗೆ ದೇವಾಲಯದಲ್ಲಿ ಮಹಿಳೆಯರಿಗೆ ಕುಂಕುಮಾರ್ಚನೆ ಮತ್ತು ಬಾಲಕಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು ಎಂದು ದೇವಾಲಯ ಟ್ರಸ್ಟ್ ಸಮಿತಿ ಸದಸ್ಯರಾದ ಮಹೇಶ ಪೂಜಾರ ಮತ್ತು ವಿದ್ಯಾನಂದ ಪೂಜಾರ ಹೇಳಿದರು.

ಭಕ್ತರಿಗೆ ಮಾವಿನ ಹಣ್ಣಿನ ಶೀಕರಣೆ, ಹೋಳಿಗೆ, ಸಿಹಿ ಹುಗ್ಗಿ ಮತ್ತು ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಭಕ್ತರು ಬಂದಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-19-375173801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.