ಬಾದಾಮಿ: ಇಲ್ಲಿನ ಬನಶಂಕರಿದೇವಿ ಜಾತ್ರೆ ಮುಗಿದು ಎರಡು ತಿಂಗಳು ಗತಿಸಿದರೂ ದೇವಾಲಯ ಸುತ್ತಲಿನ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಆಗದೆ, ಹಾಗೆಯೇ ಉಳಿದಿದೆ. ಧಾರ್ಮಿಕ ಕ್ಷೇತ್ರದಲ್ಲಿ ತ್ಯಾಜ್ಯ ಆವರಿಸಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಬಾದಾಮಿಯಿಂದ ಬನಶಂಕರಿ ದೇವಾಲಯಕ್ಕೆ ಹೋಗುವ, ದೇವಾಲಯದ ಸಮೀಪದ ರಸ್ತೆಯಲ್ಲಿ ತ್ಯಾಜ್ಯದ ರಾಶಿ ಕಾಣಸಿಗುತ್ತದೆ. ಗಾಳಿ ಬೀಸಿದಾಗ ಪ್ಲಾಸ್ಟಿಕ್ ಕಸವು ವಾಹನ ಸವಾರರು ಹಾಗೂ ಪಾದಚಾರಿಗಳ ಮುಖಕ್ಕೆ ರಾಚುತ್ತದೆ.

ಬಾದಾಮಿ, ಗದಗ, ಶಿವಪುರ, ಶಿವಯೋಗಮಂದಿರ ರಸ್ತೆ ಪಕ್ಕದಲ್ಲಿ, ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳದ ಸುತ್ತ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ ಮತ್ತಿತರ ತ್ಯಾಜ್ಯ ಸಂಗ್ರಹವಾಗಿದೆ. ಇದರಿಂದ ಸುತ್ತಲಿನ ಪರಿಸರ ಕಲುಷಿತಗೊಂಡಿದ್ದು, ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಕಿರಿಕಿರಿ ಉಂಟಾಗಿದೆ.

ಇಲ್ಲಿ ಕೆಲವು ಖಾಸಗಿ ವ್ಯಕ್ತಿಗಳ ಮತ್ತು ಸಂಘ–ಸಂಸ್ಥೆಗಳ ನಿವೇಶನಗಳಿದ್ದು, ಜಾತ್ರೆ ಸಂದರ್ಭದಲ್ಲಿ ನಾಟಕ ಕಂಪನಿಗಳು ಮತ್ತು ಅಂಗಡಿಗಳಿಗೆ ಬಾಡಿಗೆ ಕೊಡುತ್ತಾರೆ. ಹೀಗೆ ಬಾಡಿಗೆ ಪಡೆದವರು ತ್ಯಾಜ್ಯವನ್ನು ಹಾಗೇ ಬಿಟ್ಟು ಹೋಗಿದ್ದಾರೆ. ಮುಂದಿನ ವರ್ಷ ಜಾತ್ರೆ ಆರಂಭದಲ್ಲಷ್ಟೇ ಜಾಗ ಸ್ವಚ್ಛಗೊಳಿಸುತ್ತಾರೆ. ಹೀಗಾಗಿ, ಇಡೀ ವರ್ಷ ತ್ಯಾಜ್ಯ ಅಲ್ಲೇ ಇರುತ್ತದೆ. ಚೊಳಚಗುಡ್ಡ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ದೂರುತ್ತಾರೆ.

‘ಜಾತ್ರೆಗೆ ಮುನ್ನ ಸಿದ್ಧತೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ದೇವಾಲಯ ಸಮಿತಿ, ಗ್ರಾಮ ಪಂಚಾಯಿತಿ ಮತ್ತು ದೇವಾಂಗ ಸಮಿತಿಯವರು ಸಭೆ ನಡೆಸುತ್ತಾರೆ. ಜಾತ್ರೆ ಮುಗಿದ ನಂತರ ಸ್ವಚ್ಛತೆ ಕುರಿತು ಸಹ ಚರ್ಚೆ ಆಗಿರುತ್ತದೆ. ಆದರೆ, ಯಾರೂ ಕಾಳಜಿ ವಹಿಸುವುದಿಲ್ಲ’ ಎಂದು ಭಕ್ತರು ಆಕ್ರೋಶಪಡಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-19-1434782172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.