ಬುಧವಾರ, ಜುಲೈ 15, 2020
22 °C

ಬನಶಂಕರಿದೇವಿ ದರ್ಶನ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾದಾಮಿ: ಸಮೀಪದ ಧಾರ್ಮಿಕ ಪುಣ್ಯಕ್ಷೇತ್ರ ಬನಶಂಕರಿ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕಾಗಿ ಜೂನ್ 8 ರಿಂದ ತೆರೆಯುವುದಾಗಿ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಲ್ಲಾರಭಟ್ಟ ಪೂಜಾರ ತಿಳಿಸಿದ್ದಾರೆ.

ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಅರ್ಚಕರು ದೇವಿಯ ಪೂಜಾ ಸೇವೆ ಮಾಡುವುದರಿಂದ ಭಕ್ತರಿಗೆ ದರ್ಶನದ ಅವಕಾಶವಿಲ್ಲ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8.30 ರವರೆಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಭಕ್ತರು ಸುರಕ್ಷಿತ ಅಂತರ ಕಾಪಾಡಲು ಮಹಾದ್ವಾರದಿಂದ ಗುಡಿಯವರೆಗೆ ಬಾಕ್ಸ್ ಹಾಕಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಸ್ಯಾನಿಟೈಸರ್ ಯಂತ್ರ ಇಡಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಪ್ರವೇಶಿಸಬೇಕು ಎಂದು ತಿಳಿಸಿದ್ದಾರೆ.

ಕಾಯಿ, ಕರ್ಪೂರ, ಹೂವು ಮತ್ತಿತರ ಪೂಜಾ ಸಾಮಗ್ರಿಗಳನ್ನು ತರಬಾರದು. ಭಕ್ತರಿಂದ ದೇವರಿಗೆ ಯಾವುದೇ ಪೂಜಾ ಸೇವೆ ಇಲ್ಲ. ದೇವಾಲಯದಲ್ಲಿ ತೀರ್ಥ, ಪ್ರಸಾದ ಮತ್ತು ಅನ್ನದಾಸೋಹ ಇರುವುದಿಲ್ಲ. ದೇವಿಯ ದರ್ಶನ ಮಾತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು