ಬೇಲೂರು (ಬಾದಾಮಿ): ‘ಲಿಂ. ಬಸವಪ್ರಸಾದ ಶ್ರಿಗಳು ಬಸವ ತತ್ವದಂತೆ ಲಿಂಗಪೂಜಾ ನಿಷ್ಠರಾಗಿ ಕಾಯಕ, ದಾಸೋಹ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಬೇಲೂರ ಗ್ರಾಮದಲ್ಲಿ ಬುಧವಾರ ಗುರುಬಸವೇಶ್ವರ ಮಠದ ಬಸವಪ್ರಸಾದ ಶ್ರೀಗಳ 10ನೇ ಪುಣ್ಯಸ್ಮರಣೋತ್ಸವ ಮತ್ತು ಮಹಾಂತ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವಾದಿ ಶರಣರ ಪರಂಪರೆ ಬಹು ಶ್ರೇಷ್ಠವಾದದ್ದು. ಮಠದ ನೂತನ ಪಟ್ಟಾಧಿಕಾರ ಹೊಂದಿದ ಮಹಾಂತ ಶ್ರೀಗಳು ಶರಣರ ವಚನ ಮೌಲ್ಯಗಳ ಪ್ರಚಾರ ಮಾಡಿ ಸಮಾಜ ಸೇವೆಯನ್ನು ಮಾಡಿ’ ಎಂದು ಶುಭ ಹಾರೈಸಿದರು.

‘ಉತ್ತಮ ಸಮಾಜವನ್ನು ನಿರ್ಮಿಸಲು ಮಠದ ಸ್ವಾಮೀಜಿಗಳ ತ್ಯಾಗ ದೊಡ್ಡದಿದೆ. ಪಟ್ಟಾಧಿಕಾರ ಹೊಂದಿದ ನೂತನ ಶ್ರೀಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಭಕ್ತರು ಮಠಗಳಿಗೆ ಶಕ್ತಿ ತುಂಬಬೇಕು’ ಎಂದು ಗದುಗಿನ ಸಿದ್ದರಾಮ ಶ್ರಿ ಹೇಳಿದರು.

‘ಬಸವಾದಿ ಶರಣರ ಪರಂಪರೆಯ ಬಗ್ಗೆ ಸಮಾಜದ ಜನರಲ್ಲಿ ಅರಿವು ಮೂಡಿಸಬೇಕು. ಮೂಢ ನಂಬಿಕೆಗಳನ್ನು ಹೋಗಲಾಡಿಸಿ ವೈಚಾರಿಕತೆ ಬೆಳೆಸಿ’ ಎಂದು ಇಳಕಲ್ ಗುರುಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ನೂತನ ಪೀಠಾಧಿಪತಿಯಾದ ಮಹಾಂತ ಶ್ರೀಗಳಿಗೆ ಗುರುಬಸವ ಸ್ವಾಮೀಜಿ ಷಟಸ್ಥಲ ಬ್ರಹ್ಮೋಪದೇಶ ಮತ್ತು ಚಿನ್ಮಯಾನುಗ್ರಹ ಪ್ರಸಾದಿ ಸ್ಥಲ ದೀಕ್ಷೆಯನ್ನು ನೀಡಿದರು.

ಗುರುಬಸವೇಶ್ವರ ಮಠದ ಮುಕ್ತಾಯಕ್ಕ ಅಮ್ಮನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನೂತನ ಮಠಾಧೀಶರಾದ ಮಹಾಂತ ಶ್ರೀ ಮಾತನಾಡಿ, ‘ಭಕ್ತರ ಸಹಕಾರದಿಂದ ಸಮಾಜ ಸೇವೆಯಲ್ಲಿ ತೊಡಗುವೆ’ ಎಂದು ಹೇಳಿದರು.

ನಿಜಗುಣಪ್ರಭು ತೋಂಟದಾರ್ಯ ಸ್ವಾಮೀ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು.

ಶಿವಲಿಂಗೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗಣ್ಯರಾದ ಎಂ.ಬಿ. ಹಂಗರಗಿ, ಬಿ.ಪಿ. ಹಳ್ಳೂರ, ಎಫ್.ಆರ್. ಪಾಟೀಲ, ಬೇಲೂರ ಗ್ರಾಮದ ಹಿರಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-19-1523753206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.