ಬಾದಾಮಿ: ‘ಸರ್ಕಾರದ ಆದೇಶದಂತೆ ಗೋಹತ್ಯೆ ನಿಷೇಧಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅಂತವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ಲ ಸಮುದಾಯಗಳ ಸಹಕಾರ ಅವಶ್ಯ. ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಿ’ ಎಂದು ಸಿಪಿಐ ಕರಿಯಪ್ಪ ಬನ್ನೆ ಹೇಳಿದರು.

ಬಕ್ರೀದ್ ಹಬ್ಬದ ಅಂಗವಾಗಿ ಪುರಸಭೆ ಸಭಾಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸೋಮವಾರ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.

ಪಟ್ಟಣದ ಹೋಟೆಲ್ಗಳಿಗೆ ಬೇರೆ ಊರುಗಳಿಂದ ಗೋಮಾಂಸ ಬರುತ್ತಿರುವುದರ ಬಗ್ಗೆ ಸಾರ್ವಜನಿಕರು ತಿಳಿಸಿದರೆಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

‘ಕೆರೂರ ಮತ್ತು ಜಾಲಿಹಾಳ ಗ್ರಾಮದ ಜಾನುವಾರು ಸಂತೆಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ನಡೆದಿದೆ. ಗೋಹತ್ಯೆ ತಡೆಗಟ್ಟಲು ಎಪಿಎಂಸಿ ಮತ್ತು ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ಮಾಡಿ. ಕಳ್ಳತನದಿಂದ ಗೋವುಗಳ ಸಾಗಾಟ ಮಾಡುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಿ’ ಎಂದು ಕುಮಾರ ಗಾಣಿಗೇರ ಒತ್ತಾಯಿಸಿದರು.

ಅಧಿಕಾರಿಗಳು ಕಾಟಾಚಾರಕ್ಕಾಗಿ ಶಾಂತಿ ಸಭೆ ಮಾಡಬೇಡಿ. ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ ಎಂದು ಹಿಂದೂ ಸಂಘಟನೆಗಳ ರವಿ ಪೂಜಾರ, ರವಿ ವಡ್ಡರ ಮತ್ತು ತಾಲ್ಲೂಕು ಘಟಕದ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಬೇಲೂರಪ್ಪ ವಡ್ಡರ ಸಭೆಯಲ್ಲಿ ತಿಳಿಸಿದರು.

‘ಬಾದಾಮಿ ಪಟ್ಟಣ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರ ಶಾಂತಿ ಸೌಹಾರ್ದದ ತಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಸೌಹಾರ್ದದಿಂದ ಹಬ್ಬವನ್ನು ಆಚರಿಸೋಣ’ ಎಂದು ಪುರಸಭೆ ಮಾಜಿ ಅಧ್ಯಕ್ಷ ರಾಜಮಹ್ಮದ್ ಬಾಗವಾನ ಹೇಳಿದರು.

‘ಸಮಾಜದಲ್ಲಿ ಶಾಂತಿ ಕಾನೂನು ಸುವ್ಯಸ್ಥೆಗೆ ಕಾಪಾಡುವ ಉದ್ದೇಶದಿಂದ ಗೋವನ್ನು ‘ ರಾಷ್ಟ್ರೀಯ ಪ್ರಾಣಿ ’ ಎಂದು ಘೋಷಿಸಬೇಕು’ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹ್ಮದಯುಸೂಫ್ ಪೀರಜಾದೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಅಧಿಕಾರಿಗಳಿಗ ಮನವಿ ಮಾಡಿದರು.

‘ಸರ್ಕಾರದ ಆದೇಶದಂತೆ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಪ್ರಾಣಿಗಳ ಹತ್ಯೆಯಿಂದ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ’ ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿ ಶ್ರೀಕಾಂತ ಸಬನೀಸ್ ಹೇಳಿದರು.

ಕ್ರೈಂ ಪಿಎಸ್ಐ ಎನ್.ಎಲ್. ವಾಲೀಕಾರ, ಹೆಚ್ಚುವರಿ ಪಿಎಸ್ಐ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ, ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ.ಎಂ.ಬಿ. ಪಾಟೀಲ, ಕಂದಾಯ ಇಲಾಖೆಯ ವಿದ್ಯಾನಂದ ಜಾಧವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-19-230639155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.