ಬಾದಾಮಿ: ‘ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ನವೀನ ಹುಚ್ಚರಡ್ಡಿ ಹೇಳಿದರು.

ತಾಲ್ಲೂಕಿನಲ್ಲಿ ಕೆಟ್ಟಿರುವ ಶುದ್ಧ ನೀರಿನ ಘಟಕವನ್ನು ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅರ್ಧಕ್ಕೆ ಸ್ಥಗಿತವಾಗಿರುವ ಜೆಜೆಎಂ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ ಅವರು ತಿಳಿಸಿದರು.

‘ಬಹುತೇಕ ಹಳ್ಳಿಗಳಲ್ಲಿ ಏಪ್ರೀಲ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಚಿಮ್ಮಲಗಿ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಲಾಗಿದೆ. ಗಿಡ್ಡನಾಯಕನಾಳ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪಡೆಯಲಾಗುತ್ತಿದೆ. ಇಲ್ಲಿಯೂ ಕೊಳವೆ ಬಾವಿ ಕೊರೆಯಿಸಲಾಗುವುದು. ಕೈನಕಟ್ಟಿ ಗ್ರಾಮಕ್ಕೆ ಹಿಡಕಲ್ ಜಲಾಶಯದ ಘಟಪ್ರಭಾ ಕಾಲುವೆಯಿಂದ ನೀರು ಪಡೆ ಯಲಾಗುವುದು ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಒಟ್ಟು 181 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು. ಇದರಲ್ಲಿ 101 ಘಟಕಗಳು ಸ್ಥಗಿತವಾಗಿವೆ. ಕೆಟ್ಟಿರುವ ನೀರಿನ ಘಟಕಗಳು ದುರಸ್ತಿ ಯಾಗದ ಸ್ಥಿತಿಯಲ್ಲಿವೆ. ಆದಾಗ್ಯೂ 16 ಘಟಕಗಳ ಮರು ದುರಸ್ತಿ ಕಾರ್ಯ ನಡೆ ದಿದೆ 10 ಘಟಕಗಳ ದುರಸ್ತಿ ಮುಗಿದಿದೆ ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಲಾಗುವುದು ’ ಎಂದರು.

ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿ ಯೋಜನೆ ಬಹುತೇಕ ಪೂರ್ಣಗೊಂಡಿದೆ. 8 ಗ್ರಾಮಗಳಲ್ಲಿ ಮಾತ್ರ ಕಾಮಗಾರಿ ಉಳಿದಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದರು.

‘ಕುಡಿಯುವ ನೀರಿನ ಘಟಕ ಬಂದಾಗಿ ಐದಾರ ವರ್ಸ ಅತ್ರಿ ಪಟ್ಟದಕಲ್ಲು ಗ್ರಾಮ ಪಂಚಾಯ್ತಿ ಮತ್ತ ತಾಲ್ಲೂಕಿನ ಕುಡಿಯುವ ನೀರು ಇಲಾಕೆ ಅಧಿಕಾರಿಗಳಿಗೆ ಹೇಳಿಕೋಂತ ಅದೀವಿ ಇನ್ನೂ ಸುದ್ದ ಮಾಡವಲ್ರು ’ ಎಂದು ಬಿ.ಎನ್. ಜಾಲಿಹಾಳ ಗ್ರಾಮದ ರುದ್ರಗೌಡ ಪ್ರತಿಕ್ರಿಯಿಸಿದರು.

‘ಕೆಟ್ಟು ನಿಂತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಿ ಹಂತ ಹಂತವಾಗಿ ದುರಸ್ತಿ ಮಾಡಲಾಗುವುದು’ ಎಂದು ಗ್ರಾಮೀಣ ನೀರು ಪೂರೈಕೆ ಇಲಾಖೆ ಎಂಜಿನಿಯರ್ ನವೀನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.