ಬಾದಾಮಿ: ‘ಖಾಸಗಿ ಉದ್ದಿಮೆಗಳಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶ ಮತ್ತು ಅನುಕೂಲಗಳಿವೆ. ಖಾಸಗಿ ಕಂಪನಿ ಮತ್ತಿತರ ಉದ್ಯಮಗಳಲ್ಲಿ ಉದ್ಯೋಗ ತೊಡಗಿಸಿಕೊಳ್ಳಿ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ತಾಲ್ಲೂಕು ಘಟಕದ ನದಾಫ್ (ಪಿಂಜಾರ) ಸಂಘದಿಂದ ಇಲ್ಲಿನ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಗೋವಾದ ಬಾನು ಅಸೋಶಿಯೇಶನ್ ಆಶ್ರಯದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ‘ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರಿಗೆ ಯುವನಿಧಿ ಆರಂಭಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದಿಂದ 52 ಸಾವಿರ ಹುದ್ದೆಗಳ ನೇಮಕಾತಿ ಕಾರ್ಯ ನಡೆಯಲಿದೆ’ ಎಂದು ಹೇಳಿದರು.

ಎಂ.ಆರ್.ಎಫ್.ಲಿ. ಗೋವಾ ಕಂಪನಿ ವ್ಯವಸ್ಥಾಪಕ ಸರ್ವೇಶ ಹಾಲಂಕಾರ, ಬಾನು ಅಸೋಸಿಯೇಶನ್ ಮುಖ್ಯಸ್ಥ ಎಂ.ಆರ್. ನದಾಫ್ ಯುವಕರಿಗೆ ಉದ್ಯೋಗದ ಕುರಿತು ಮಾಹಿತಿ ತಿಳಿಸಿದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮೊಹ್ಮದಯುಸೂಫ್ ಪೀರಜಾದೆ. ಪುರಸಭೆ ಮಾಜಿ ಅಧ್ಯಕ್ಷ ಆರ್.ಎಫ್. ಬಾಗವಾನ ಯುವಕರು ಉದ್ಯೋಗವನ್ನು ಪಡೆದು ಪೋಷಕರ ಮತ್ತು ಸಮಾಜದ ಋಣವನ್ನು ತೀರಿಸಬೇಕು ಎಂದರು.

ತಾಲ್ಲೂಕು ನದಾಫ್ (ಪಿಂಜಾರ) ಸಂಘದ ಅಧ್ಯಕ್ಷ ವೈ.ಎಫ್.ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಎಫ್.ಎ.ದೊಡಮನಿ, ನೂರಅಹ್ಮದ್ ನದಾಫ್, ಎಲ್.ಎಂ.ಯಂಡಿಗೇರಿ ವೇದಿಕೆಯಲ್ಲಿದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಇನ್ನೂರಕ್ಕೂ ಅಧಿಕ ಯುವಕರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-19-2133899315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.