ಬಾದಾಮಿ: ಬಾಗಲಕೋಟೆ ರಸ್ತೆಯ ಹಿರೇಮುಚ್ಚಳಗುಡ್ಡ ಗ್ರಾಮದ ಸಮೀಪ ಹಲಕುರ್ಕಿ ಗ್ರಾಮದ ರೈತ ಈಶ್ವರಪ್ಪ ವೀರಭದ್ರಪ್ಪ ಕಟಗೇರಿ ಎರಡು ಎಕರೆ ಹೊಲದಲ್ಲಿ ದ್ರಾಕ್ಷಿ ಬೆಳೆಯನ್ನು ಸೊಂಪಾಗಿ ಬೆಳೆದಿದ್ದಾರೆ. ದ್ರಾಕ್ಷಿ ಹಣ್ಣಿನ ಗೊನೆಗಳು ಬಳ್ಳಿಗೆ ಭಾರವಾಗಿ ಜೋತು ಬಿದ್ದಿವೆ.

ರೈತ ಈಶ್ವರಪ್ಪ ತಮ್ಮ ಹೊಲದಲ್ಲಿ ನೀರಾವರಿ ಮತ್ತು ಒಣಬೇಸಾಯದಿಂದ ಸಾವಯವ ಕೃಷಿಯೊಂದಿಗೆ ಸಮಗ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಒಬ್ಬ ಮಾದರಿ ರೈತರಾಗಿ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ತಮ್ಮ 15 ಎಕರೆ ಹೊಲದಲ್ಲಿ 10 ಎಕರೆ ಪ್ರದೇಶದಲ್ಲಿ ಮಳೆಯಾಶ್ರಿತದಲ್ಲಿ ಶೇಂಗಾ, ಮೆಕ್ಕೆ ಜೋಳ, ತೊಗರಿ ಬೆಳೆಯುವರು. 5 ಎಕರೆ ಪ್ರದೇಶದಲ್ಲಿ ನೀರಾವರಿ ಮೂಲಕ ಪಪ್ಪಾಯಿ, ದಾಳಿಂಬೆ ಮತ್ತು ದ್ರಾಕ್ಷಿ ಹಣ್ಣನ್ನು ಬೆಳೆದಿದ್ದಾರೆ.

15 ವರ್ಷಗಳ ಹಿಂದೆಯೇ ಎರಡು ಎಕರೆ ಪ್ರದೇಶದಲ್ಲಿ ಮಾಣಿಕಚಮನ್ ತಳಿಯ ದ್ರಾಕ್ಷಿ ತಳಿ ಬೆಳೆಯ ಬಳ್ಳಿಯನ್ನು ಬೆಳೆಸಿದ್ದಾರೆ. 15 ವರ್ಷಗಳಿಂದ ದ್ರಾಕ್ಷಿ ಹಣ್ಣಿನ ಫಸಲಿನ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ.

ಎರಡು ಎಕರೆ ಪ್ರದೇಶದಲ್ಲಿ ಎರಡು ಸಾವಿರ ದ್ರಾಕ್ಷಿ ಸಸಿಗಳನ್ನು ನೆಡಲಾಗಿದೆ. ಬಳ್ಳಿ ಬೆಳೆಯಲು ಆಸರೆಗೆ ಕಲ್ಲನ್ನು ನೆಟ್ಟು ಸುತ್ತ ಸಂತಿ ಬೇಲಿಯನ್ನು ಹಾಕಲಾಗಿದೆ. ಮೇಲೆಯೂ ತಂತಿಯನ್ನು ಹಾಕಿ ಮಳೆಗೆ ಸಂರಕ್ಷಿಸಿದ್ದಾರೆ.

ಆರಂಭದಿಂದಲೂ ದ್ರಾಕ್ಷಿ, ಪಪ್ಪಾಯಿ ಮತ್ತು ದಾಳಿಂಬೆ ಗಿಡಕ್ಕೆ ಹನಿ ನೀರಾವರಿ ಅಳವಡಿಸಲಾಗಿದೆ. ಎರಡು ಕೊಳವೆ ಬಾವಿಗಳ ಮೂಲಕ ನೀರು ಹರಿಸುತ್ತಿದ್ದಾರೆ.

‘ದ್ರಾಕ್ಷಿ ಬಳ್ಳಿ ಹಾಕಿದ ಮೂರು ವರ್ಷದ ನಂತರ ಫಸಲು ಆರಂಭವಾಗುವುದು. ಹೊಲದ ತುಂಬೆಲ್ಲ ಬಳ್ಳಿಯ ಆಸರೆಗೆ ಕಲ್ಲು ಮತ್ತು ತಂತಿಯನ್ನು ಜೋಡಿಸುವುದು. ಆಳಿನ ಖರ್ಚು ಸೇರಿ ಒಟ್ಟು ರೂ. 5 ಲಕ್ಷ ಬಂಡವಾಳ ಹಾಕಬೇಕು ಆರಂಭದಲ್ಲಿ ಚಿಕ್ಕ ಬಳ್ಳಿ ಇರುವುದರಿಂದ ಇಳುವರಿ ಕಡಿಮೆ ಬರುವುದು. ಬಳ್ಳಿ ಹಬ್ಬಿದಂತೆ ಇಳುವರಿ ಅಧಿಕ ಬರುವುದು ’ ಎಂದು ತಿಳಿಸಿದರು.

ದ್ರಾಕ್ಷಿ ಬೆಳೆಗೆ ಸಾವಯವ ಮತ್ತು ಎರೆಹುಳು ಗೊಬ್ಬರವನ್ನು ಬಳಸಲಾಗುವುದರಿಂದ ಹಣ್ಣಿನ ರುಚಿ ಹೆಚ್ಚಾಗುವುದು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರುವುದು. ಈ ವರ್ಷ ಎಕರೆಗೆ 16 ಟನ್ ಇಳುವರಿ ಬಂದು ಖರ್ಚು ತೆಗೆದು ₹ 8 ಲಕ್ಷ ಆದಾಯವಾಗಿದೆ ’ ಎಂದರು.

‘ ರೈತ ಶ್ರಮವಹಿಸಿ ಭೂತಾಯಿಯ ಮಡಿಲಿಗೆ ಬೆವರು ಸುರಿಸಿ ದುಡಿದರೆ ಭೂತಾಯಿ ರೈತರನ್ನು ಎಂದೂ ಕೈಬಿಡೋದಿಲ್ಲ ರಕ್ಷಿಸುವಳು. ರೈತರು ಹೊಲದಲ್ಲಿ ಶ್ರಮವಹಿಸಬೇಕು ´ ಎಂದು ರೈತ ಸಮುದಾಯಕ್ಕೆ ವಿನಂತಿಸಿದರು.

‘ ನಾ ಪಿಯುಸಿ ಮುಗಿಸಿದ ಕೂಡಲೇ ಸಾಲಿ ಕಲಿಯಾಕ ಆಗಲಿಲ್ಲ. ರೈತನಾಗಿ ದುಡಿಯಲು ಆರಂಭಿಸಿದೆ.ನಲವತ್ತು ವರ್ಸದಿಂದ ಒಕ್ಕಲುತನ ಮಾಡಿರುವೆ. ನಾನಂತೂ ಓದಲಿಲ್ಲ ಮಕ್ಕಳನ್ನು ಓದಿಸಬೇಕು ಎಂದು ಮೂವರು ಮಕ್ಕಳಲ್ಲಿ ಒಬ್ಬಳು ಸರ್ಕಾರಿ ಕಾಲೇಜಿನ ಉಪನ್ಯಾಸಕಿ, ಒಬ್ಬ ಮಗಳು ಮತ್ತು ಮಗ ಎಂ.ಬಿ.ಬಿ.ಎಸ್. ಓದುತ್ತಿದ್ದಾರೆ ’ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.