ಬಾದಾಮಿ: ಅದಿಮಾನವರ ನೆಲೆಗಳ ರಕ್ಷಣೆ ಮತ್ತು ಶಿಲಾಯುಧಗಳ ರಕ್ಷಣೆ ಸಲುವಾಗಿ ನದಿ ಹಾಗೂ ನದಿ ದಡದ ಹಳ್ಳಿಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಭಾರತೀಯ ಪುರಾತತ್ವ ಇಲಾಖೆ ತಾಲ್ಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿತ್ತು. ಆದರೂ, ನದಿ ದಡದ ಗ್ರಾಮಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಲೇ ಇದೆ.

‘ತಾಲ್ಲೂಕಿನಲ್ಲಿ ಹರಿದಿರುವ ಮಲಪ್ರಭಾ ನದಿ ದಂಡೆಯ ಬೆಟ್ಟ ಗುಡ್ಡದಲ್ಲಿ ಮತ್ತು ನದಿಯಲ್ಲಿ ಪ್ರಾಗೈತಿಹಾಸ ಕಾಲದ ಶಿಲಾಯುಧಗಳ ಸಂಶೋಧನೆ ನಡೆದಿದೆ. ಶಿಲಾಯುಧಗಳ ನೆಲೆ ಪತ್ತೆಯಾಗಿವೆ. ಆದಾಗ್ಯೂ ನದಿ ದಂಡೆಯ ಗ್ರಾಮಗಳಲ್ಲಿ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆದಿರುವುದು ಅಚ್ಚರಿಯಾಗಿದೆ’ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ರಮೇಶ ಮೂಲಿಮನಿ ಹೇಳಿದರು.

ಪ್ರಾಗೈತಿಹಾಸ ಕಾಲದ ಅಂದಾಜು 2 ಲಕ್ಷ ವರ್ಷಗಳ ಹಿಂದೆ ಮಲಪ್ರಭಾ ನದಿ ದಂಡೆಯ ರೋಣ ತಾಲ್ಲೂಕಿನ ಮಾಳವಾಡ, ಮೆಣಸಗಿ, ಹೊಳೆಆಲೂರ, ಬಾದಾಮಿ ತಾಲ್ಲೂಕಿನ ಬೂದಿಹಾಳ, ಜಕನೂರ, ಖ್ಯಾಡ, ಕಾತರಕಿ, ತೆಮಿನಾಳ , ನೀರಲಗಿ, ಮಣ್ಣೇರಿ, ಢಾಣಕಶಿರೂರ, ಚೊಳಚಗುಡ್ಡ, ಶಿವಯೋಗಮಂದಿರ ಸಮೀಪದ ಮಲಪ್ರಭಾ ನದಿಯಲ್ಲಿ ನೂರಾರು ಶಿಲಾಯುಧಗಳ ಪತ್ತೆಯಾಗಿವೆ.

‘2012 ಮೈಸೂರ ಎಎಸ್ಐ ಉತ್ಖನನ ವಿಭಾಗ ಮತ್ತು 2021 ರಲ್ಲಿ ನಾಗಪೂರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಾಗೈತಿಹಾಸಿಕ ಶಾಖೆ ಅಧಿಕಾರಿಯಾಗಿದ್ದಾಗ ಇತಿಹಾಸ ಸಂಶೋಧಕರ ಮತ್ತು ವಿದ್ಯಾರ್ಥಿಗಳಿಂದ ತೆಮಿನಾಳ, ಕಾತರಕಿ, ಶಿವಯೋಗಮಂದಿರ ಮತ್ತು ಖ್ಯಾಡ ಗ್ರಾಮದ ಬೆಟ್ಟದಲ್ಲಿ ನದಿಯಲ್ಲಿ ಶಿಲಾಯುಧಗಳನ್ನು ಪತ್ತೆ ಮಾಡಲಾಗಿತ್ತು’ ಎಂದು ತಿಳಿಸಿದರು.

ಮಲಪ್ರಭಾ ನದಿ ದಂಡೆಯ ಗುಡ್ಡಗಳಲ್ಲಿ ಆದಿಶಿಲಾಯುಗದ ಮಾನವರ ಜನವಸತಿ ನೆಲೆಯಾಗಿತ್ತು. ಬೆಟ್ಟದಲ್ಲಿ ವಾಸವಾಗಿದ್ದು ಶಿಲಾಯುಧಗಳನ್ನು ತಯಾರಿಸುತ್ತಿದ್ದರು. ಆಹಾರಕ್ಕಾಗಿ ನೀರು ಕುಡಿಯಲು ಬಂದ ಪ್ರಾಣಿಗಳ ಬೇಟೆಯಾಡಲು ಚೂಪಾದ ಆಯುಧಗಳನ್ನು ಬಳಸುತ್ತಿದ್ದರು. 2012 ರಲ್ಲಿ ಸಾಕಷ್ಟು ಶಿಲಾಯುಧಗಳು ದೊರಕಿವೆ. ಹಿಂದೆ ತೆಮಿನಾಳ, ಖ್ಯಾಡ ಮತ್ತು ಕಾತರಕಿ ಬೆಟ್ಟ ಅದಿಮಾನವರು ಶಿಲಾಯುಧಗಳನ್ನು ತಯಾರಿಸುವ ಕೇಂದ್ರವಾಗಿದ್ದವು.

ನದಿಯಲ್ಲಿ ಹಾಗೂ ನದಿ ದಂಡೆಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ಯಾವುದೇ ಚೆಕ್ ಪೋಸ್ಟ್ ಇಲ್ಲ. ಹಗಲು ರಾತ್ರಿ ಮರಳು ಸಾಗಾಟ ನಡೆಯುತ್ತಿದೆ ಎಂದು ನದಿ ದಂಡೆಯ ಗ್ರಾಮಸ್ಥರು ದೂರಿದರು.

‘ರೈತರು ತಮ್ಮ ಹೊಲದಲ್ಲಿ ಎಷ್ಟು ಆಳ-ಅಗಲ ಮರಳು ತೆಗೆದಿದ್ದಾರೆ ಎಂದು ನೋಡಲು ಯಾವ ಅಧಿಕಾರಿಗಳೂ ಸ್ಥಳಕ್ಕೆ ಬರುವುದಿಲ್ಲ. ಮನ ಬಂದಂತೆ ಜೆಸಿಬಿ ಮೂಲಕ ಮರಳು ತೆಗೆಯುವರು. ನದಿ ಪಾತ್ರ ಯಾವುದು ಎಂಬುದು ತಿಳಿಯುತ್ತಿಲ್ಲ. ಮಳೆಗಾಲದಲ್ಲಿ ನೆರೆ ಪ್ರವಾಹ ಬಂದು ಬೆಳೆಗಳು ಹಾನಿಯಾಗುತ್ತಿವೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರೈತರ ಪ್ರಾಣ ಉಳಿಸಬೇಕಿದೆ’ ಎಂದು ಕಿತ್ತಲಿ ಗ್ರಾಮದ ರೈತ ಬಸನಗೌಡ ಗೌಡರ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-1919911584

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.