ಬಾದಾಮಿ: ಚಾಲುಕ್ಯರು ನಿರ್ಮಿಸಿದ ಮಹಾಕೂಟೇಶ್ವರ ದೇವಾಲಯದ ರಥೋತ್ಸವವು ವೈಶಾಖ ಬುದ್ಧ ಪೌರ್ಣಿಮೆ ದಿನ ಮೇ 1 ರಂದು ರಾತ್ರಿ 8 ಗಂಟೆಗೆ ಹೂವಿನ ರಥೋತ್ಸವ ಮತ್ತು ಮೇ 2 ರಂದು ಸಂಜೆ 5 ಗಂಟೆಗೆ ದೊಡ್ಡ ರಥೋತ್ಸವ ನಡೆಯಲಿದೆ.

ಬಾದಾಮಿ ಪಟ್ಟಣದ ಕಾಲು ದಾರಿಯಿಂದ ನಡೆಯುತ್ತ ಉತ್ತರದಲ್ಲಿ ನಸುಗೆಂಪು ವರ್ಣದ ಬೆಟ್ಟದ ಸೌಂದರ್ಯ, ಬೆಟ್ಟದ ಮೇಲಿರುವ ದೇವಾಲಯಗಳು, ಕನ್ನಡದ ಮೊತ್ತ ಮೊದಲ ತ್ರಿಪದಿ ಕಪ್ಪೆ ಅರಭಟ್ಟನ ಶಾಸನ ಮತ್ತು ವೈವಿಧ್ಯಮಯ ಪ್ರಕೃತಿ ಸೌಂದರ್ಯದ ಬೆಟ್ಟಗಳನ್ನು ವೀಕ್ಷಿಸುತ್ತ 5 ಕಿ.ಮೀ. ಕ್ರಮಿಸಿದಾಗ ಹಚ್ಚ ಹಸುರಿನ ಎರಡು ಬೃಹತ್ ಬೆಟ್ಟಗಳ ಮಧ್ಯೆ ಕಂದಕದಲ್ಲಿ ಮಹಾಕೂಟೇಶ್ವರ ದೇವಾಲಯವಿದೆ.

ದೇವಾಲಯದ ದಕ್ಷಿಣ ಮಂಟಪದ ಹೊರಗಿನ ದ್ವಾರದಲ್ಲಿ ಎಡ ಬಲಕ್ಕೆ ಸ್ತ್ರೀ, ಪುರುಷ ಅಸ್ತಿಪಂಜರದಂತಿರುವ ಎರಡು ಶಿಲಾ ಮೂರ್ತಿಗಳು, ಮಹಾದ್ವಾರದ ಎದುರಿಗೆ ಗಣೇಶ ಮತ್ತು ನಂದಿ ಮೂರ್ತಿಗಳು ನಿಮ್ಮನ್ನು ಸ್ವಾಗತಿಸುತ್ತಿವೆ. 6 ನೇ ಶತಮಾನದಿಂದ 8 ನೇ ಶತಮಾನದ ವರೆಗೆ ಚಾಲುಕ್ಯ ದೊರೆಗಳಾದ ಮೊದಲನೆ ಕೀರ್ತಿ ವರ್ಮ, ಮಂಗಳೇಶ ಹಾಗೂ ವಿಜಯಾದಿತ್ಯನ ಕಾಲದಲ್ಲಿ ಮಹಾ ಕೂಟೇಶ್ವರ ಮತ್ತು ಸುತ್ತ ಈಶ್ವರ ದೇವಾ ಲಯಗಳನ್ನು ನಿರ್ಮಿಸಿ ಪುರುಜ್ಜೀವನಗೊಳಿಸುತ್ತ ಶೈವ ಧರ್ಮಕ್ಕೆ ಪ್ರಾಮುಖ್ಯತೆ ಕೊಟ್ಟಿರುವುದಕ್ಕೆ ಇಲ್ಲಿನ ದೇವಾಲಯಗಳು ಸಾಕ್ಷಿಯಾಗಿವೆ. ಶೈವ ಧರ್ಮದ ಪ್ರಮುಖ ಕೇಂದ್ರವಾಗಿತ್ತು ಎಂದು ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ.

ಚಾಲುಕ್ಯ ದೊರೆ ಮಂಗಳೇಶನು ಕಳಚೂರ್ಯ ವಂಶದ ದೊರೆ ಬುದ್ಧವರ್ಮನನ್ನು ಯುದ್ಧದಲ್ಲಿ ಸೋಲಿಸಿ ಎಲ್ಲ ಸಂಪತ್ತನ್ನು ಮಹಾಕೂಟೇಶ್ವರ ದೇವಾಲಯಕ್ಕೆ ಅರ್ಪಿಸಿದನೆಂದು ಶಾಸದಿಂದ ತಿಳಿಯುತ್ತಿದೆ.

ಯುದ್ಧದ ವಿಜಯ ಸಂಕೇತವಾಗಿ ಕ್ರಿ.ಶ. 601 ರಲ್ಲಿ ಸಿದ್ಧಾರ್ಥ ವೈಶಾಖ ಪೌರ್ಣಿಮೆ ದಿನ ಶಿಲಾಸ್ತಂಭದಲ್ಲಿ ಶಾಸನವನ್ನು ಬರೆಯಿಸಿ ಧರ್ಮಸ್ತಂಭವನ್ನು ದೇವಾಲಯದ ಎದುರಿಗೆ ಸ್ಥಾಪಿಸಿದನು. ಈ ಶಾಸನವು ಈಗ ವಿಜಯಪುರದ ವಸ್ತು ಸಂಗ್ರಹಾಲಯದಲ್ಲಿದೆ. ಇದೇ ಕುರುಹಿಗೆ ಪ್ರತಿವರ್ಷ ವೈಶಾಖ ಶುದ್ಧ ಪೌರ್ಣಿಮೆ ದಿನ ರಥೋತ್ಸವ ನಡೆಯಲಿದೆ.

ಮಹಾಕೂಟೇಶ್ವರ ದೇವಾಲಯದ ಸುತ್ತ 20 ಕ್ಕೂ ಅಧಿಕ ದೇವಾಲಯಗಳಿದ್ದವು. ಕಾಲನ ಹೊಡೆತಕ್ಕೆ ಮತ್ತು ನಿಧಿಗಳ್ಳದ ಹಾವಳಿಯಿಂದ ಕೆಲ ದೇವಾಲಯಗಳು ಮಾಯವಾಗಿವೆ. ಸಂಗಮೇಶ್ವರ, ಮಲ್ಲಿಕಾರ್ಜುನ, ಸಂಗಮೇಶ್ವರ, ಪಿನಾಕ ಪಾಣಿ, ಸರಸ್ವತಿ, ನಂದಿ, ಚಿಕ್ಕ ಈಶ್ವರ ಗುಡಿ ದ್ರಾವಿಡ, ನಾಗರ ಮತ್ತು ಕದಂಬ ಶೈಲಿಯಲ್ಲಿ ಗುಡಿ ಗೋಪುರವನ್ನು ರೂಪಿಸಲಾಗಿದೆ.

ಮಹಾಕೂಟೇಶ್ವರ ದೇವಾಲಯದ ಹೊರಭಿತ್ತಿಯಲ್ಲಿ ರಾಮಾಯಣ ಮಹಾಭಾರತ ಸನ್ನಿವೇಶದ ಚಿಕ್ಕ ಮೂರ್ತಿಗಳನ್ನು ಶಿಲೆಯಲ್ಲಿ ಅರಳಿಸಿದ್ದಾರೆ. ವಿವಿಧ ದೇವಾಲಯಗಳ ಭಿತ್ತಿಯಲ್ಲಿ ಅರ್ಧನಾರೀಶ್ವರ, ಭೂ ವರಾಹ, ಹರಿಹರ, ನರಸಿಂಹ, ಲಕುಲೀಶ, ನಂದಿ ಮೇಲೆ ಕುಳಿತ ಶಿವಪಾರ್ವತಿ, ವೀರಭದ್ರ , ಭಗ್ನ ಗೊಂಡ ಲಜ್ಜಾಮೂರ್ತಿ ಕಾಣಬಹುದು.

ಮಹಾಕೂಟೇಶ್ವರ ದೇವಾಲಯದ ಪಕ್ಕದಲ್ಲಿ ವಿಶಾಲವಾದ ವಿಷ್ಣು ಪುಷ್ಕರಣಿ ಇದೆ. ಪುಷ್ಕರಣಿಯಲ್ಲಿ ಚತುರ್ಮುಖ ಬ್ರಹ್ಮ ಮೂರ್ತಿ ಗುಡಿ ಮತ್ತು ಪುಷ್ಕರಣಿ ನೀರಿನಲ್ಲಿ ಉತ್ತರಕ್ಕೆ ಶಂಕರಲಿಂಗ ಗುಡಿ ಇದೆ. ಮಹಾದ್ವಾರದ ಹೊರಗೆ ಕಾಶಿ ಪುಷ್ಕರಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡುವರು. 6 ನೇ ಶತಮಾನದಲ್ಲಿ ರೂಪಿಸಿದ ಪುಷ್ಕರಣಿ ಎಂದೂ ಬತ್ತಿಲ್ಲ.

ದೇವಾಲಯಕ್ಕೆ ಸರಿಯಾರಿ ರಸ್ತೆ ಸಾರಿಗೆ ಸಂಪರ್ಕವಿಲ್ಲ. ಆಟೊ ಮೂಲಕ ಹೋಗಬೇಕು. ಪ್ರತಿ ಅಮಾವಾಸ್ಯೆಗೆ ಭಕ್ತರು ಆಗಮಿಸುವರು. ರಥೋತ್ಸವಕ್ಕೆ ನಾಡಿನ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.