ಬಾದಾಮಿ: ಕಾಟಾಪೂರ ಗ್ರಾಮದ ಶಿರಡಿ ಸಾಯಿಬಾಬಾ ಮಂದಿರದ 30ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಮತ್ತು ಸಾಯಿ ರಾಮನವಮಿ ಉತ್ಸವ ಮಾರ್ಚ್ 25 ರಿಂದ 28 ರ ವರೆಗೆ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

25 ರಂದು ಬೆಳಿಗ್ಗೆ 5ಕ್ಕೆ ಕಾಕಡಾರತಿ, ಮಧ್ಯಾಹ್ನದ ಪೂಜೆಯ ನಂತರ ಸಂಜೆ 4ಕ್ಕೆ ಶಿರಡಿ ಸಾಯಿಬಾಬಾ ಮಂದಿರದಿಂದ ಪಟ್ಟದಕಲ್ಲು ವರೆಗೆ ಸಾಯಿಬಾಬಾ ಭಾವಚಿತ್ರದ ಮೆರವಣಿಗೆ, ಸಂಜೆ 9ಕ್ಕೆ ಸಾಯಿ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

26ರಂದು ಬೆಳಿಗ್ಗೆ 7ಕ್ಕೆ ಮಂದಿರದ ವಾರ್ಷಿಕೋತ್ಸವದ ಅಂಗವಾಗಿ ಸಾಯಿಬಾಬಾ ಮೂರ್ತಿಗೆ ಶಿನಂದನ್ ದೀಕ್ಷಿತ್, ನವೀನ್ ಭಟ್ಟ ಮತ್ತು ರಾಜೇಶ್ ದೀಕ್ಷಿತ್ ಅವರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಮಧ್ಯಾಹ್ನ 12ಕ್ಕೆ ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಕ್ಕೆ ಹಾಕಿದ ನಂತರ ಸರ್ವಧರ್ಮ ಸಾಮೂಹಿಕ ವಿವಾಹಗಳ ಸಮಾರಂಭಕ್ಕೆ ವಿವಿಧ ಮಠಾಧೀಶರು ಮತ್ತು ಗಣ್ಯರು ಆಗಮಿಸುವರು.

27, 28 ರಂದು ಮಧ್ಯಾಹ್ನ 3ಕ್ಕೆ ಕುಸ್ತಿ ಸ್ಪರ್ಧೆಗಳು ರಾತ್ರಿ 8ಕ್ಕೆ ಕಾಟಾಪೂರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿವೆ ಎಂದು ಸಮಿತಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-19-1672555864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.