ಬಾದಾಮಿ: ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟು ಹೋದ ಚಿನ್ನದ ಆಭರಣ ಮತ್ತು ನಗದನ್ನು ಸ್ಥಳೀಯ ರಸ್ತೆ ಸಾರಿಗೆ ಸಂಸ್ಥೆಯ ಘಟಕದ ನಿರ್ವಾಹಕ ಹಾಗೂ ಚಾಲಕರು ಕಳೆದುಕೊಂಡವರಿಗೆ ಮರಳಿ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

ಇಳಕಲ್-ಬಾದಾಮಿ ಬಸ್ ಸಂಚರಿಸುವಾಗ ಹುನಗುಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆಯೊಬ್ಬರು ಪರ್ಸ್ ಬಿಟ್ಟು ಹೋಗಿದ್ದರು. ಬಸ್ ನಿರ್ವಾಹಕ ಮತ್ತು ಚಾಲಕರು ಪರ್ಸ ಅನ್ನು ಬಾದಾಮಿ ಘಟಕ ವ್ಯವಸ್ಥಾಪಕರಿಗೆ ಒಪ್ಪಿಸಿದ್ದರು. ಘಟಕ ವ್ಯವಸ್ಥಾಪಕ ಅಶೋಕ ಕೋರಿ ಪಾನ್ ಕಾರ್ಡ್ ಮೂಲಕ ಪರ್ಸ್ನ ವಾರಸುದಾರರಾದ ಸೂಳಿಬಾವಿ ಗ್ರಾಮದ ಕೀರ್ತಿ ಕೊಳ್ಳಿ ಅವರನ್ನು ಸಂಪರ್ಕಿಸಿ ಪರ್ಸ್ ಹಾಗೂ ವಸ್ತುಗಳನ್ನು ಮರಳಿಸಿದ್ದಾರೆ. ಈ ಪರ್ಸಿನಲ್ಲಿ ₹ 45,000 ಮೌಲ್ಯದ ಚಿನ್ನದ ತಾಳಿ ಸರ, ಎರಡು ಬಂಗಾರದ ಗುಂಡು ಮತ್ತು ₹ 1,210 ಇದ್ದವು.

ಸಾರಿಗೆ ಸಂಸ್ಥೆ ಘಟಕದ ನಿರ್ವಾಹಕ ರಾಜು ಮೇಲಿನಮನಿ, ಚಾಲಕ ಆರ್.ಎಸ್. ಹಿರೇಮಠ ಮತ್ತು ಘಟಕ ವ್ಯವಸ್ಥಾಪಕರಿಗೆ ಕೀರ್ತಿ ಅವರು ಕೃತಜ್ಞತೆ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-19-1174590811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.