ಬಾದಾಮಿ: ಇಲ್ಲಿನ ಶಿವಯೋಗಮಂದಿರ ಶಾಖಾ ಮಠದ ಆವರಣದಲ್ಲಿ ಸಿರಿಗಂಧ ಸಂಸ್ಕೃತಿ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಸಂಭ್ರಮದ ಆಚರಣೆ ಅಂಗವಾಗಿ ಶನಿವಾರ ಚೈತ್ರ ನಿನಾದ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸ್ತ್ರೀಯ ಸಂಗೀತ, ಶರಣರ ವಚನಗಳು, ದಾಸರ ಪದ್ಯಗಳು, ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಸಂಗೀತ ಕಲಾವಿದ ಜಯತೀರ್ಥ ತಾಸಗಾಂವ ಸುಶ್ರಾವ್ತವಾಗಿ ಹಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.

ಲಕ್ಷ್ಮಿ ಕುಲಕರ್ಣಿ ಮತ್ತು ವೈಷ್ಣವಿ ಜಾಡಗೌಡ ಬಾಲಕಿಯರು ಭರತನಾಟ್ಯವನ್ನು ಪ್ರದರ್ಶಿಸಿದರು. ಹಾರ್ಮೋನಿಯಂ ಚಂದ್ರಶೇಖರ್ ಆಲೂರ ಮತ್ತು ಪ್ರಸಾದ ಕುಲಕರ್ಣಿ ತಬಲಾ ಸಾತ್ ನೀಡಿದರು.

ಸಿರಿಗಂಧ ಸಂಸ್ಕೃತಿ ಬಳಗದ ಗೌರವ ಅಧ್ಯಕ್ಷ ಡಿ.ಎಂ. ಪೈಲ ಅಧ್ಯಕ್ಷ ದಾಜೀಬಾ ಜಗದಾಳೆ ಯುಗಾದಿ ಹಬ್ಬದ ಮಹತ್ವದ ಕುರಿತು ಹೇಳಿದರು.

ಸಿರಿಗಂಧ ಸಂಸ್ಕೃತಿ ಬಳಗದ ಸದಸ್ಯರು ಮತ್ತು ಸಂಗೀತ ಆಸಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-19-1913784674

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.