ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೂರ | ‘ಅಮ್ಮನ ಹೆಸರಿನಲ್ಲಿ ಒಂದು ವೃಕ್ಷ’ ಕಾರ್ಯಕ್ರಮಕ್ಕೆ ಚಾಲನೆ

Published : 1 ಅಕ್ಟೋಬರ್ 2024, 14:20 IST
Last Updated : 1 ಅಕ್ಟೋಬರ್ 2024, 14:20 IST
ಫಾಲೋ ಮಾಡಿ
Comments

ಕೆರೂರ : ಅಮ್ಮನ‌ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ ಎಂಬ ಸರ್ಕಾರದ ವಿಶಿಷ್ಟವಾದ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಚಾಲನೆ ನೀಡಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಸಸಿಗಳನ್ನು ನೆಟ್ಟು ಮಾತನಾಡಿದರು.

ಮರಗಳನ್ನು ನೆಟ್ಟು ಭೂಮಿಯ ಅವನತಿಯನ್ನು ತಡೆಯುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಮಾನವನ ದುರಾಸೆಯಿಂದ ಸಾಕಷ್ಟು ಗಿಡಗಳು ನಾಶವಾಗಿವೆ. ಭೂಮಿಯ ಮೇಲಿನ ಸಕಲ ಜೀವಿಗಳ ಒಳಿತಿಗಾಗಿ ಗಿಡಗಳನ್ನು ನೆಡುವುದು ಅತ್ಯಗತ್ಯ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಎಂಜಿನಿಯರ್ ಎಂ.ಐ.ಹೊಸಮನಿ ಮಾತನಾಡಿ, ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಭೂಮಿ ಮರುಭೂಮಿ ಆಗುವುದನ್ನು ತಡೆಯಲು ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಗಿಡಗಳನ್ನು ನೆಡಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಮುಖಂಡರಾದ ಸದಾನಂದ ಮದಿ, ಸುರೇಶ ಪೂಜಾರ, ಸಿಬ್ಬಂದಿಗಳಾದ ನವೀನ ಮಾಹಜನ್ನವರ, ಬಸವರಾಜ ಕಟ್ಟಿಮನಿ, ಜಿ.ಎ‌.ನಧಾಫ, ಅನಿಲ ಕಪಾಟೆ, ಅಶ್ವತ ರಂಗನಗೌಡ್ರ, ಸಂಗಮೇಶ ಮಾದರ, ಗೀತಾ ಕಲಗುಡಿ, ಮಂಜುಳಾ ಹಿರೇಮಠ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT