ಬಾಗಲಕೋಟೆ: ತ್ರಿವಳಿ ದಾಸೋಹ ಪರಂಪರೆಯ ಮಳೆರಾಜೇಂದ್ರಸ್ವಾಮಿ ಮಠ ಭಾವ್ಯಕತ್ಯೆ ಸಂಕೇತವಾಗಿದೆ ಎಂದು ಚಿಕ್ಕುಂಬಿ ಅಜಾತ ನಾಗಲಿಂಗೇಶ್ವರ ಮಠದ ಅಭಿನವ ನಾಗಲಿಂಗ ಸ್ವಾಮೀಜಿ ಹೇಳಿದರು.

ಮುರನಾಳ ಪುನರ್ವಸತಿ ಕೇಂದ್ರದಲ್ಲಿ ಮಳೆರಾಜೇಂದ್ರಸ್ವಾಮಿ ಮಠ ಆವರಣದಲ್ಲಿ ಜರುಗಿದ ಮಠದಲ್ಲಿ ನಡೆದ ಉಚಿತ ಸಾಮೂಹಿಕ ಸರ್ವಧರ್ಮ ವಿವಾಹ ಮತ್ತು ಸರ್ವಧರ್ಮ ಸಭೆಯಲ್ಲಿ ಮಾತನಾಡಿ ಅವರು, ಮದುವೆ ಸಂಭ್ರಮ ಜೀವನದುದ್ದಕ್ಕೂ ಇರಬೇಕು. ತಿಂಥಣಿ ಮೌನೇಶ್ವರರ ಪರಂಪರೆಗೆ ಸೇರಿದ ಮಠವಾಗಿರುವುದರಿಂದ ಇಲ್ಲಿ ಯಾವುದೇ ಜಾತಿ ಭೇದಗಳಿಗೆ ಅವಕಾಶವಿಲ್ಲ ಎಂದರು.

ಅನಗವಾಡಿ ಪೂರ್ಣಾನಂದ ಆಶ್ರಮದ ಅನಸೂಯಾ ತಾಯಿ ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯ ಎಂದರು

ಗುರುನಾಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಜಾತಿಗಳ ನಡುವಿನ ಸಂಘರ್ಷಗಳು ಮರೆಯಾಗಿ ಎಲ್ಲರೂ ಒಂದಾಗಿ ಬಾಳಬೇಕಾಗಿದೆ. ಎಲ್ಲರೂ ಒಂದಾದಾಗ ಮಾತ್ರ ಗ್ರಾಮೀಣ ಹಾಗೂ ನಗರ ಅಭಿವೃದ್ಧಿಯ ಜೊತೆಗೆ ಜನರ ಏಳಿಗೆ ಸಾಧ್ಯ ಎಂದರು.

ಶ್ರೀಮಠದ ಜಗನ್ನಾಥ ಸ್ವಾಮೀಜಿ ಮಾತನಾಡಿ, ಶ್ರೀಮಂತ–ಬಡವ ಎಂಬ ಭಾವ ಅಳಿಯಬೇಕು. ಎಲ್ಲರೂ ಸಮಾನರು. ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮ ಬಾಳು ಎಂಬ ಧ್ಯೇಯದಡಿ ಜೀವಿಸಬೇಕಾಗಿದೆ, ಇದುವೇ ಶ್ರೀಮಠ ಆಶಯವಾಗಿದೆ ಎಂದು ಹೇಳಿದರು.

ನಿತ್ಯಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ನಿರಂಜನ ಸ್ವಾಮೀಜಿ, ಜಗನ್ನಾಥ ಸ್ವಾಮೀಜಿ, ಚೆತನ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ಹೂವಪ್ಪ ರಾಠೋಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-19-911470857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.