ಬಾಗಲಕೋಟೆ: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದೊಡ್ಡ ಪ್ರಮಾಣದ ಜಿಗಿತ ಕಂಡು ಬಂದಿದ್ದು, ಸ್ಥಾನದಲ್ಲಿ ಮಾತ್ರ ದೊಡ್ಡ ಬದಲಾವಣೆಯಾಗಿಲ್ಲ.

ಜಿಲ್ಲೆಯು ಶೇ95.42ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಮೊದಲ ಪರೀಕ್ಷೆಯಲ್ಲಿ ಜಿಲ್ಲೆಯು ಶೇ67.78ರಷ್ಟು ಗಳಿಸಿ(ಮೂರು ಪರೀಕ್ಷೆಗಳು ಸೇರಿ ಶೇ82.3ರಷ್ಟು), 16ನೇ ಸ್ಥಾನ ಗಳಿಸಿತ್ತು. ಶೇ 27.64ರಷ್ಟು ಫಲಿತಾಂಶದಲ್ಲಿ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ 14,596 ಬಾಲಕರು ಮತ್ತು 15,515 ಬಾಲಕಿಯರು ಸೇರಿ 30,111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 13,589 ಬಾಲಕರು, 15,142 ಬಾಲಕಿಯರು ಸೇರಿ 28,731 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಬಾಲಕರು ಶೇ 93.10 ರಷ್ಟು ತೇರ್ಗಡೆ ಹೊಂದಿದರೆ, ಬಾಲಕಿಯರು ಶೇ 97.60 ರಷ್ಟು ತೇರ್ಗಡೆ ಹೊಂದಿದ್ದಾರೆ. ಬಾಲಕರು 1007 ಮತ್ತು ಬಾಲಕಿಯರು 373 ಸೇರಿ ಒಟ್ಟು 1380 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ 176 ಶಾಲೆಗಳು ಶೇ100ರಷ್ಟು ಫಲಿತಾಂಶ ಪಡೆದು ಹೊಸ ದಾಖಲೆ ಬರೆದಿವೆ. 2,748 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು, 5,198 ವಿದ್ಯಾರ್ಥಿಗಳು ಶೇ80ರಿಂದ 90, 5,713 ವಿದ್ಯಾರ್ಥಿಗಳು ಶೇ 70ರಿಂದ 80ರಷ್ಟು, 5,865 ವಿದ್ಯಾರ್ಥಿಗಳು ಶೇ 60ರಿಂದ 70ರಷ್ಟು ಅಂಕಗಳನ್ನು ಗಳಿಸಿದ್ದಾರೆ.

625ಕ್ಕೆ 621 ಅಂಕ ಪಡೆದು ಐವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, 625ಕ್ಕೆ 620 ಅಂಕ ಪಡೆದ ಐವರು ವಿದ್ಯಾರ್ಥಿಗಳು ದ್ವಿತೀಯ ಹಾಗೂ 625ಕ್ಕೆ 619 ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 501 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ಬಾದಾಮಿ ತಾಲ್ಲೂಕಿನಲ್ಲಿ (ಶೇ 96.74) ವಿದ್ಯಾರ್ಥಿಗಳು, ಬಾಗಲಕೋಟೆ ತಾಲ್ಲೂಕಿನಲ್ಲಿ (ಶೇ 94.59), ಬೀಳಗಿ ತಾಲ್ಲೂಕಿನಲ್ಲಿ (ಶೇ 89.31), ಹುನಗುಂದ ತಾಲ್ಲೂಕಿನಲ್ಲಿ (ಶೇ 96.44), ಜಮಖಂಡಿ ತಾಲ್ಲೂಕಿನಲ್ಲಿ (ಶೇ 95.85) ಹಾಗೂ ಮುಧೋಳ ತಾಲ್ಲೂಕಿನಲ್ಲಿ (ಶೇ 93.37) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ಬಾದಾಮಿ ತಾಲ್ಲೂಕು ಪ್ರಥಮ ಸ್ಥಾನ ಪಡೆದರೆ, ಬೀಳಗಿ ತಾಲ್ಲೂಕು ಕೊನೆಯ ಸ್ಥಾನ ಗಳಿಸಿದೆ.

625ಕ್ಕೆ 621 ಅಂಕ ಪಡೆದ 4 ವಿದ್ಯಾರ್ಥಿಗಳು

ಬಾಗಲಕೋಟೆಯ ಸಮೃದ್ಧಿ ಗುರುಕುಲ ಶಾಲೆಯ ಆದರ್ಶ ಶಿಪರಮಟ್ಟಿ, ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನವೀನ ಕುಂಬಾರ, ಬಾದಾಮಿಯ ಗೌರಮ್ಮ ನಾಗಪ್ಪ ಕೋಟ ಇಂಗ್ಲಿಷ್ ಮೀಡಿಯಂ ಶಾಲೆಯ ಈಶ್ವರಿ ಹಳ್ಳೂರ, ಜಮಖಂಡಿ ತಾಲ್ಲೂಕಿನ ರಾಮಪೂರ ಪುರಾಣಪ್ರಜ್ಞ ಇಂಗ್ಲಿಷ್ ಮಾಧ್ಯಮ ಶಾಲೆಯ ಸುಶಾಂತ ಬುರ್ಲಿ 621 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.