ಬಾಗಲಕೋಟೆ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ನಮ್ಮ ನಾಯಕರು. ಅವರು ಚುನಾವಣೆ ಪ್ರಚಾರಕ್ಕೆ ಬರಬೇಕು ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಅವರು ಬಂದರೆ ನಮಗೂ ಶಕ್ತಿಯೇ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

‘ಯತ್ನಾಳ ಅವರು ತಾಂತ್ರಿಕ ಕಾರಣದಿಂದ ಬರಬೇಕೋ, ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ. ರಾಜ್ಯ ಅಧ್ಯಕ್ಷರು ಅವರು ಬರಬಾರದು, ಇವರು ಬರಬಾರದು ಎನ್ನುವುದಿಲ್ಲ. ಯತ್ನಾಳ ಅವರು ಬಂದರೆ ಲಾಭ ಆಗುತ್ತದೆ ಅನ್ನುವ ಅಭಿಪ್ರಾಯ ಎಲ್ಲರಲ್ಲಿದೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಪಕ್ಷದಿಂದ ಉಚ್ಚಾಟನೆ ಆಗಿದ್ದಾರೆ. ಅವರಿಗೂ ಬರಲು ಇರಿಸು–ಮುರಿಸು ಆಗಬಹುದು. ಅವರು ಬಂದು ಪ್ರಚಾರ ಮಾಡಿದರೆ ಅಡ್ಡಿ ಪಡಿಸಲಿಕ್ಕೆ ನಾವ್ಯಾರು? ಅವರನ್ನು ಹಿಂದೆಯೂ, ಈಗಲೂ, ಮುಂದೆಯೂ ಬಿಟ್ಟು ಕೊಡುವುದಿಲ್ಲ. ತಾಂತ್ರಿಕ ತೊಂದರೆ ಇದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಪಕ್ಷಕ್ಕೆ ಮತ್ತೆ ಜೋಡಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ’ ಎಂದರು.

‘ಕಾರ್ಯಕರ್ತರು ಕೇಳುತ್ತಾರೆ ಎಂದರೆ ಅವರೊಬ್ಬರೇ ಹಿಂದೂ ನಾಯಕರೇ ಎಂಬ ಪ್ರಶ್ನೆಗೆ, ‘ಬಿಜೆಪಿಯಲ್ಲಿ ಹಿಂದೂ ನಾಯಕರು ಬಹಳ ಮಂದಿ ಇದ್ದಾರೆ. ವಿಜಯಪುರ, ಬಾಗಲಕೋಟೆ ಅಖಂಡ ಜಿಲ್ಲೆಗಳು. ಈ ಭಾಗದವರು ಆಗಿರುವುದರಿಂದ ಬರಲಿ ಎನ್ನುತ್ತಾರೆ. ಕರಾವಳಿಗೆ ಹೋದರೆ ಅಲ್ಲಿನ ನಾಯಕರನ್ನು ಕೇಳುತ್ತಾರೆ. ಹಿಂದುತ್ವ ಗೆಲ್ಲಬೇಕು ಎನ್ನುವುದೇ ಎಲ್ಲರ ಗುರಿ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-19-1618151711

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.