ಶುಕ್ರವಾರ, ಜನವರಿ 24, 2020
17 °C
ಅರೆವಳಿಕೆ ನೀಡಿ ಹಿಡಿದು ಬೋನಿಗೆ ಹಾಕಿದ ಅರಣ್ಯಇಲಾಖೆ ಸಿಬ್ಬಂದಿ

ಕೊನೆಗೂ ಸೆರೆ ಸಿಕ್ಕ ವಾನರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಇಲ್ಲಿನ ಎಪಿಎಂಸಿಯ ಸಿ.ವಿ.ಚರಂತಿಮಠ ಕಲ್ಯಾಣಮಂಟಪದಲ್ಲಿ ಕರೆಯದೇ ಮದುವೆ ಮಂಟಪಕ್ಕೆ ಬಂದು ಅತಿಥಿ–ಅಭ್ಯಾಗತರಿಗೆ ಮುಜುಗರವನ್ನುಂಟು ಮಾಡುತ್ತಿದ್ದ ವಾನರ ಕೊನೆಗೂ ಸೆರೆ ಸಿಕ್ಕಿದ್ದಾನೆ. 

ಕಲ್ಯಾಣಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಮದುವೆ ಸಮಾರಂಭಕ್ಕೆ ಎಂದಿನಂತೆಯೇ ರಾಜಠೀವಿಯಲ್ಲಿ ಬಂದ ಮಂಗ ಅತಿಥಿಗಳ ಸಾಲಿನಲ್ಲಿ ಆಸೀನವಾಗಿತ್ತು. ಅದನ್ನು ಕಂಡ ಕಲ್ಯಾಣಮಂಟಪದ ಸಿಬ್ಬಂದಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಪಶುವೈದ್ಯರೊಂದಿಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ಕೊನೆಗೂ ಚಾಣಾಕ್ಷ್ಯ ಮಂಗವನ್ನು ಸೆರೆಹಿಡಿದು ಬೋನಿಗೆ ಹಾಕಿದರು. ಇದಕ್ಕೆ ನಗರದ ಹಂದಿ ಹಿಡಿಯುವವರ ಎರಡು ತಂಡಗಳು ನೆರವಾದವು.

ಕಳೆದೊಂದು ವಾರದಿಂದ ಕೈಗೆ ಸಿಗದೇ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದ ಮಂಗ ಮದುವೆ ಮನೆಯವರಿಗೆ ತಲೆನೋವಾಗಿತ್ತು. ಯಾರಿಗೂ ಉಪಟಳ ಮಾಡದಿದ್ದರೂ ಅದರ ಉಪಸ್ಥಿತಿಯೇ ಮದುವೆಗೆ ಬಂದವರ ನೆಮ್ಮದಿ ಕೆಡಿಸುತ್ತಿತ್ತು. ಹೀಗಾಗಿ ಅದನ್ನು ಹಿಡಿಯಲು ಅರಣ್ಯ ಇಲಾಖೆಯ ನೆರವು ಕೋರಲಾಗಿತ್ತು.

ಪಶುವೈದ್ಯರು ಅರೆವಳಿಕೆ ಮದ್ದು ನೀಡಿ ಮಂಗನ ಹಿಡಿಯಲು ನೆರವಾದರು. ಬೋನಿನಲ್ಲಿ ಸೆರೆ ಹಿಡಿದ ಮಂಗನನ್ನು ದಾಂಡೇಲಿ ಕಾಡಿಗೆ ಒಯ್ದು ಬಿಡಲಾಗುವುದು ಎಂದು ಕಲ್ಯಾಣ ಮಂಟಪದ ವ್ಯವಸ್ಥಾಪಕ ಮುರುಗೇಶ ಕುಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)