ರಾಂಪುರ: ಬಾಗಲಕೋಟೆ-ಆಲಮಟ್ಟಿ ರಸ್ತೆಯಲ್ಲಿ ಬರುವ ಸೀತಿಮನಿ ಎಲ್.ಟಿ ಯಲ್ಲಿ ಬಸ್ ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಸಕ ಉಮೇಶ ಮೇಟಿ ಮಂಗಳವಾರ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಈ ಕುರಿತು ಮನವಿ ಸಲ್ಲಿಸಿ, ತಂಗುದಾಣ ಇರದೇ ಇರುವುದರಿಂದ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಗಾಗಿ ಕಾಯಲು ರಸ್ತೆಯಲ್ಲೇ ನಿಂತುಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದು ಹೇಳಿದರು.

ಜೊತೆಗೆ ಬಾಗಲಕೋಟೆಯಿಂದ ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ ಕಡೆಗೆ ಹೋಗುವ ಬಸ್ ಗಳು ಸೀತಿಮನಿ ತಾಂಡಾ ಬಳಿ ನಿಲ್ಲದೇ ಹೋಗುತ್ತಿದ್ದು ಶಾಲಾ, ಕಾಲೇಜಿಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೆಲವಷ್ಟು ಬಸ್ಗಳನ್ನಾದರೂ ನಿಲುಗಡೆ ಮಾಡಿಸುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.

ಮುಖಂಡ ಬಸವಂತಪ್ಪ ಮೇಟಿ, ಸೀತಿಮನಿ ತಾಂಡಾದ ಸಂತೋಷ ಲಮಾಣಿ, ಗುರು ಲಮಾಣಿ, ಸಂಜು ಲಮಾಣಿ, ವಿಠ್ಠಲ ಲಮಾಣಿ, ಪ್ರಕಾಶ ಲಮಾಣಿ, ಆನಂದ ಲಮಾಣಿ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-19-212372332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.