ಬಾಗಲಕೋಟೆ: ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸೋಮವಾರ ಬಾಗಲಕೋಟೆಯಲ್ಲಿ ಬೃಹತ್ ಬೈಕ್ ರ್ಯಾಲಿ ಮಾಡಲಾಯಿತು.

ಸತ್ಯ ಶೋಧಕ ಸಂಘ, ಸಾಮ್ರಾಟ ಅಶೋಕ ಕ್ರೀಡಾ ಸಂಸ್ಥೆ, ಅಂಬೇಡ್ಕರ್ ಅಭಿಮಾನಿಗಳು ನೂರಾರು ಮಂದಿ ಭಾಗವಹಿಸಿ, ಜೈಭೀಮ್ ಘೋಷಣೆ ಕೂಗಿದರು.

ಅಂಬೇಡ್ಕರ್ ನಗರದಿಂದ ಆರಂಭವಾದ ರ್ಯಾಲಿ ಪಂಕಾ ಮಸೀದಿ, ಪೊಲೀಸ್ ಚೌಕ್ ಮಾರ್ಗವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತದ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನವನಗರದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಸತ್ಯ ಶೋಧಕ ಸಂಘದ ರಾಜ್ಯ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ‘ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ’ ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಅರುಣ ಗರಸಂಗಿ ಮಾತನಾಡಿ, ‘ಯುವಕರು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ರಾಮಪ್ಪ ನಾರಾಯಣಿ, ಗಿರಿಯಪ್ಪ ನಾರಾಯಣಿ, ದೀಲಿಪ ಡವಳೇಶ್ವರ, ಬಂಡೆಪ್ಪ ನಾರಾಯಣಿ, ಮುತ್ತಪ್ಪ ಆರೆತ್ತಿನವರ, ರಾಮು ನಾರಾಯಣಿ, ಕಿರಣ ನೀಲನಾಯಕ, ರಾಮಣ್ಣ ಹೊಸಳ್ಳಿ, ಸುನೀಲ ಬಂಡಿ, ಸಿದ್ದಣ್ಣ ಮಾವಿನತೋಟ, ಕುಮಾರ ಬಿಚ್ಚೇಲಿ, ನಿಂಗಪ್ಪ ಅಂಬಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-19-1687875203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.