ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್, ಬಿಜೆಪಿಗಳೆರಡೂ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ಚುನಾ ವಣಾ ಅಖಾಡ ಸಿದ್ಧವಾಗಿದೆ. ಆರೋಪ, ಪತ್ಯಾರೋಪಗಳ ಭರಾಟೆ ಜೋರಾಗಿದೆ.

ಬಿಜೆಪಿ ಮೂರು ದಿನಗಳ ಹಿಂದೆಯೇ ವೀರಣ್ಣ ಚರಂತಿಮಠ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಕಾಂಗ್ರೆಸ್ ಭಾನುವಾರ ಉಮೇಶ ಮೇಟಿ ಅವರಿಗೆ ಟಿಕೆಟ್ ಅಂತಿಮಗೊಳಿಸಿದೆ. ಆ ಮೂಲಕ ಟಿಕೆಟ್ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ತೆರೆಬಿದ್ದಿದೆ. ಪಕ್ಷದೊಳಗಿನ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಾದ ಸವಾಲು ಅಭ್ಯರ್ಥಿಗಳ ಮುಂದಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ, ಸರ್ಕಾರಿ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆ, ಒಳಮೀಸಲಾತಿ, ಬಸವಣ್ಣ ಹಾಗೂ ಶಿವಾಜಿ ಮೂರ್ತಿಗಳ ಪ್ರತಿಷ್ಠಾಪನೆ, ಅನುದಾನ ಬಿಡುಗಡೆಯಂತಹ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಆರೋಪ, ಪ್ರತ್ಯಾರೋಪದಲ್ಲಿ
ತೊಡಗಿಸಿಕೊಂಡಿದ್ದಾರೆ.

ಯುಕೆಪಿ ಮುಳುಗಡೆ ಭೂಮಿ ಪರಿಹಾರ ಮೊತ್ತ ಘೋಷಣೆ, ಪರಿಹಾರ ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದಾರೆ. ‘ಯುಕೆಪಿ ಆರಂಭದಿಂದ ಇಲ್ಲಿಯವರೆಗೆ ಯಾವ, ಯಾವ ಸರ್ಕಾರದಲ್ಲಿ ಏನೇನಾಗಿದೆ ಎಂಬುದರ ಕುರಿತು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಸಚಿವ ಆರ್.ಬಿ. ತಿಮ್ಮಾಪುರ ಬರಲಿ’ ಎಂದು ಸಂಸದ ಗೋವಿಂದ ಕಾರಜೋಳ ಆಹ್ವಾನ ನೀಡಿದ್ದಾರೆ.

2014–15ನೇ ಸಾಲಿನ ಬಜೆಟ್ನಲ್ಲಿ ಘೋಷಣೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆಯನ್ನು 2026ರಲ್ಲಿ ಮಾಡಲಾಗಿದೆ. ಉದ್ಘಾಟನೆಯನ್ನು 2036ರಲ್ಲಿ ಮಾಡಲಾಗುತ್ತದೆಯೇ ಎಂಬುದು ಬಿಜೆಪಿ ಮುಖಂಡರ ಪ್ರಶ್ನೆ. 2014–18ರವರೆಗೆ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತಲ್ಲ ಆಗ ಯಾಕೆ ಕಾಲೇಜು ಆರಂಭಿಸಲಿಲ್ಲ. ಕಾಲೇಜು ಶಂಕುಸ್ಥಾಪನೆಗೆ ನಮ್ಮ ಸರ್ಕಾರವೇ ಬರಬೇಕಿತ್ತೇ ಎಂಬುದು ಕಾಂಗ್ರೆಸ್ ಮುಖಂಡರ ಪ್ರಶ್ನೆಯಾಗಿದೆ.

ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಬಿಜೆಪಿ ಸರ್ಕಾರ
ಇದ್ದಾಗ ಹೆಚ್ಚಳ ಮಾಡಿತ್ತು. ಅದೇ ಆಧಾರದ ಮೇಲೆ ಕಾಂಗ್ರೆಸ್ ಒಳಮೀಸಲಾತಿಯನ್ನೂ ಕಲ್ಪಿಸಿತ್ತು. ಈಗ ಕೋರ್ಟ್ ಅದಕ್ಕೆ ತಡೆ ನೀಡಿರುವುದರ ಕುರಿತು ಆರೋಪ, ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ.

ಎರಡೂ ಪಕ್ಷಗಳ ನಾಯಕರು ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಗಳು, ಅಧಿಕಾರದಲ್ಲಿದ್ದಾಗ ಮಾಡಿದ ಟೀಕೆಗಳು, ಸುಳ್ಳು ಭರವಸೆಗಳನ್ನು ಜನರು ಲೆಕ್ಕ ಹಾಕುತ್ತಿದ್ದಾರೆ.
ಏ.9ಕ್ಕೆ ಮತದಾನದ ಮೂಲಕ ಉತ್ತರ ನೀಡಲಿದ್ದಾರೆ.

ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡ ಉಭಯ ಪಕ್ಷಗಳ ನಾಯಕರು

ಬಹಿರಂಗ ಚರ್ಚೆಗೆ ಸಿದ್ಧ: ಸಂಸದ ಗೋವಿಂದ ಕಾರಜೋಳ

ಉಪ ಚುನಾವಣೆ: ಏ.9ಕ್ಕೆ ಮತದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.