ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಕಳ್ಳತನ ಯತ್ನ ತಡೆಯಲು ಮುಂದಾದವರ ಮೇಲೆ ಗುಂಡು ಹಾರಿಸಲಾಗಿದೆ.

ಆರೋಪಿ ಪ್ರಶಾಂತ ಸಿದ್ದರಾಮ ನಾವಿ ಚಡಚಣ ತಾಲ್ಲೂಕಿನ ದೇವರನಿಂಬರ್ಗಿ ಗ್ರಾಮದ ನಿವಾಸಿ.

ಹೊಳೆಪ್ಪ ಕರಿಯಪ್ಪ ಮುಗಳಿ (67) ಹಾಗೂ ಬಸವ್ವ ಹೊಳಿಯಪ್ಪ ಮುಗಳಿ (60) ದಂಪತಿ ಗ್ರಾಮದಲ್ಲಿ ಮನೆಯ ಮುಂದೆ ಮಲಗಿದ್ದರು. ಆ ವೇಳೆ, ಹೊಳೆಪ್ಪ ಕರಿಯಪ್ಪ ಮುಗಳಿ ಅವರ ಮೈಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಕದಿಯಲು ಪರಿಶೀಲಿಸುತ್ತಿದ್ದಾಗ ಆರೋಪಿಯನ್ನು ಹೊಳೆಪ್ಪ ಅವರು ಹಿಡಿದುಕೊಂಡಿದ್ದಾರೆ.

ಆಗ ಬಿಡಿಸಿಕೊಳ್ಳುವ ಯತ್ನಿಸಿದ ಆರೋಪಿ, ತನ್ನ ಬಳಿ ಹೊಂದಿದ್ದ ದೇಸಿ ನಿರ್ಮಿತ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಗುಂಡು ಬಸವ್ವ ಅವರ ಕಾಲಿಗೆ ತಗುಲಿ ಗಾಯವಾಗಿದೆ.

ಗಲಾಟೆಯ ಶಬ್ದ ಕೇಳಿ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಗಾಯಗೊಂಡ ಬಸವ್ವ ಮುಗಳಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ಆರೋಪಿ ಒಬ್ಬನೇ ಮೋಟಾರ್ ಸೈಕಲ್ನಲ್ಲಿ ಬಂದಿದ್ದು, ಆತನಿಂದ ಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.