ಹಂದಿಗುಂದ: ಗ್ರಾಮದಲ್ಲಿ ಕ್ಷೌರದ ಅಂಗಡಿ ಇಟ್ಟುಕೊಂಡಿರುವ ಹನುಮಂತ ತಿಪ್ಪಣ್ಣ ನಂದೇಶ್ವರ ಅವರು, ತಮಗೆ ಸಿಕ್ಕಿದ್ದ ₹50 ಸಾವಿರ ಹಣವಿದ್ದ ಕೈಚೀಲವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಲಾದಗಿ ನಿಲ್ದಾಣದ ಬಳಿ ಹೂ ಮಾಲೆ ಮಾರುವವರ ಅಂಗಡಿ ಪಕ್ಕದಲ್ಲಿ ಕೈ ಚೀಲ ಸಿಕ್ಕಿತ್ತು. ಅದರಲ್ಲಿ ₹50 ಸಾವಿರ ಹಣವಿತ್ತು. ಅದನ್ನು ಗಮನಿಸಿದ ಹನುಮಂತಪ್ಪ ಅಕ್ಕಪಕ್ಕದವರನ್ನು ವಿಚಾರಿಸಿದರು. ಆದರೆ, ಅದು ಯಾರಿಗೂ ಸೇರಿದ್ದಲ್ಲ ಎಂದು ಗೊತ್ತಾಯಿತು.

ಬಳಿಕ ಹಣವನ್ನು ಬಾಗಲಕೋಟೆಯ ಕಲಾದಗಿ ಪೊಲೀಸ್ ಠಾಣೆಯ ಸಿಬ್ಬಂದಿ ನೀಡಿ, ಪತ್ರ ಬರೆದು ಕೊಟ್ಟರು. ದುಡ್ಡು ಕಳೆದುಕೊಂಡವರು ಪತ್ತೆಯಾದ ನಂತರ ತಮ್ಮನ್ನು ಕರೆದು ಕೊಡುವಂತೆ ಕಲಾದಗಿ ಪಿಎಸ್ಐ ಪ್ರವೀಣ ಬೀಳಗಿ ಹಾಗೂ ಮಹಿಳಾ ಸಿಬ್ಬಂದಿ ಭುವನೇಶ್ವರಿ ಅವರಿಗೆ ಮನವಿ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-21-96690615

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.