ಜಾನುವಾರು ಪ್ರಿಯರಾದ ರೈತ ಯಲ್ಲನಗೌಡ ಪಾಟೀಲ ಅವರು, ಮಹಾಲಿಂಗಪುರ ಬಸವೇಶ್ವರ ಜಾತ್ರಾ ಸಮಿತಿ ಅಧ್ಯಕ್ಷರಾಗಿದ್ದು ಗ್ರಾಮೀಣ ಕ್ರೀಡೆಗಳಾದ ತೆರಬಂಡಿ, ಕಲ್ಲು ಎಳೆಯುವುದು, ಗಳೆ ಹೊಡೆಯುವ ರಾಜ್ಯಮಟ್ಟದ ಸ್ಪರ್ಧೆಗಳನ್ನು ಸಂಘಟಿಸುತ್ತಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಸಾಕಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಇವರ ಪ್ರಮುಖ ಹವ್ಯಾಸ. ‘ಮಹಾಲಿಂಗಪುರ ರಾಜಾ’ ಎಂದೇ ಖ್ಯಾತಿ ಪಡೆದ ₹8.1 ಲಕ್ಷ ಕೊಟ್ಟು ಖರೀದಿಸಿದ್ದ ಅವರ ಎತ್ತೊಂದು ಕಳೆದ ವರ್ಷ ತೀರಿಹೋಗಿತ್ತು. ಹೀಗಾಗಿ, ಸ್ಪರ್ಧೆಗೆಂದೇ ಇದೀಗ ಈ ಜೋಡೆತ್ತುಗಳನ್ನು ಖರೀದಿಸಿದ್ದಾಗಿ ಅವರು ತಿಳಿಸಿದ್ದಾರೆ.