ಬಾಗಲಕೋಟೆ: ಜಿಲ್ಲೆಯ ಜನಪ್ರತಿನಿಧಿಗಳ ಮಾತಿಗಲ್ಲದಿದ್ದರೂ, ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಗೆಲುವಿಗಾಗಿಯಾದರೂ ಬಜೆಟ್ನಲ್ಲಿ ಬಾಗಲಕೋಟೆ ನಗರದ ಹಾಗೂ ಜಿಲ್ಲೆಯ ಒಂದಷ್ಟು ಬೇಡಿಕೆಗಳಿಗೆ ರಾಜ್ಯ ಬಜೆಟ್ನಲ್ಲಿ ಮಾನ್ಯತೆ ಸಿಗಬಹುದು ಎಂಬ ನಿರೀಕ್ಷೆಗಳು ಗರಿಗೆದರಿವೆ.

ಸಮಗ್ರ ಮಾರುಕಟ್ಟೆ: ಬಾಗಲಕೋಟೆಯ ಒಂದು ಭಾಗದ ಮುಳುಗಡೆಯ ನಂತರದಲ್ಲಿ ಮಾರುಕಟ್ಟೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ಹರಿದು ಹಂಚಿಹೋಗಿದೆ. ಇದರಿಂದಾಗಿ ವ್ಯಾಪಾರ ಕುಸಿದಿದೆ. ಒಂದೇ ಕಡೆ ಮಾರುಕಟ್ಟೆ ಸ್ಥಾಪನೆ ಮಾಡಿದರೆ ಅನುಕೂಲವಾಗುತ್ತದೆ. ವಾಣಿಜ್ಯ ಚಟುವಟಿಕೆಗಾಗಿಯೇ ಯುನಿಟ್ 3ರಲ್ಲಿ 200 ಎಕರೆ ಭೂಮಿ ಕಾಯ್ದಿರಿಸಬೇಕು ಎಂಬುದು ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆ್ಯಂಡ್ ಎಂಟರಪ್ರೈಸಸ್ ಅಸೋಸಿಯೇಷನ್ ಆಗ್ರಹ.

ರೈಲ್ವೆ ಸ್ಟೇಷನ್ನಿಂದ ಎಪಿಎಂಸಿ ಕ್ರಾಸ್ವರೆಗೆ, ರೋಟರಿ ಸರ್ಕಲ್ನಿಂದ ಮಹಾರಾಜ್ ಗಾರ್ಡನ್ವರೆಗೆ ವಾಣಿಜ್ಯ ಚಟುವಟಿಕೆಗಾಗಿ ಮೀಸಲಿರಿಸಿ, ಅಲ್ಲಿ ಮಾಹಿತಿ ತಂತ್ರಜ್ಞಾನ, ಸಗಟು, ಗೃಹ ಉದ್ಯಮ, ಉತ್ಪಾದನೆ, ಚಿಲ್ಲರೆ ವ್ಯಾಪಾರ, ಜವಳಿ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕರಾಗಿದ್ದ ಎಚ್.ವೈ. ಮೇಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಮನವಿ ಮಾಡಿಕೊಳ್ಳಲಾಗಿದೆ.

ಎಲ್ಲ ಮೂಲಸೌಲಭ್ಯಗಳನ್ನು ಒಳಗೊಂಡ ಮಾರುಕಟ್ಟೆ ನಿರ್ಮಾಣಕ್ಕೆ ₹600 ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಲಾಗಿದೆ. ಗ್ಯಾರಂಟಿಗಳಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸರ್ಕಾರ ಬಜೆಟ್ನಲ್ಲಿ ಮಾರುಟಕ್ಟೆಗೆ ಬೇಕಾದ ಅನುದಾನ ಕೊಡಬೇಕಾದ ಒತ್ತಡದಲ್ಲಿದೆ.

‘ಮಾರುಕಟ್ಟೆಗೆ ಸಂಬಂಧಿಸಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಬಜೆಟ್ನಲ್ಲಿಯೂ ಬೇಡಿಕೆ ಈಡೇರುವ ಭರವಸೆ ಇದೆ’ ಎಂದು ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆ್ಯಂಡ್ ಎಂಟರಪ್ರೈಸಸ್ ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಟಗಿ.

ಮಲ್ಲಯ್ಯನ ಗುಡ್ಡದ ಅಭಿವೃದ್ಧಿ: ನಗರದ ಹೊರವಲಯದಲ್ಲಿರುವ ಮಲ್ಲಯ್ಯನ ಗುಡ್ಡದ ಪ್ರದೇಶಕ್ಕೆ ಸೇತುವೆ ನಿರ್ಮಾಣ ಮಾಡಿ ಸುಗಮ ಪ್ರವೇಶದ ವ್ಯವಸ್ಥೆ ಕಲ್ಪಿಸುವ ಜತೆಗೆ ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ಬಾಗಲಕೋಟೆ ಜನತೆಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.

ಅಲ್ಲಿ ಉದ್ಯಾನ, ವೀಕ್ಷಣಾ ಗೋಪುರ ಹಾಗೂ ಶಿವನ ಮೂರ್ತಿ ಸ್ಥಾಪನೆ ಮಾಡಬೇಕು. ಹಿನ್ನೀರಿನಲ್ಲಿ ಜಲ ಸಾಹಸ ಚಟುವಟಿಕೆ ಪ್ರಾರಂಭಿಸಬೇಕು. ಮಲ್ಲಯ್ಯನ ಗುಡ್ಡದಿಂದ ಹೆರಕಲ್ವರೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಬೇಕು. ನದಿ ತಟದಲ್ಲಿ ಆಂಧ್ರಪ್ರದೇಶದ ಶ್ರೀಶೈಲಂ ಮಾದರಿಯಂತೆ ಫ್ಲೋಟಿಂಗ್ ರೆಸಾರ್ಟ್ ನಿರ್ಮಿಸಬೇಕು ಎಂಬ ಕೋರಿಕೆಯನ್ನು ಈಗಾಗಲೇ ಸರ್ಕಾರದ ಮುಂದೆ ಮಂಡಿಸಲಾಗಿದೆ.

ಈಗಾಗಲೇ ಹಿನ್ನೀರಿನಲ್ಲಿ ಜಲಮಾರ್ಗ ನಿರ್ಮಾಣ ಮಾಡುವ ಯೋಜನೆ ನಡೆದಿದೆ. ಅದರಲ್ಲಿ ಇದನ್ನೂ ಸೇರಿಸಿಕೊಂಡರೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗಲಿದೆ ಎಂಬುದು ಇಲ್ಲಿನ ಜನರ ಅನಿಸಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.