ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ವೀರಣ್ಣ (ವೀರಭದ್ರಯ್ಯ) ಚರಂತಿಮಠ ಶುಕ್ರವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಗುರುವಾರ ವೀರಣ್ಣ ಅವರಿಗೆ ಟಿಕೆಟ್ ಘೋಷಿಸಿತ್ತು. ಪಕ್ಷದ ಮುಖಂಡರೊಂದಿಗೆ ಸೋಮವಾರ ಮೆರವಣಿಗೆಯಲ್ಲಿ ಬಂದು, ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು.

ಕಾಂಗ್ರೆಸ್ ನಿಂದ ಗೋವಿಂದರಾಜ ಬಳ್ಳಾರಿ (ಬಿ ಫಾರಂ ಸಲ್ಲಿಸಿಲ್ಲ), ಪಕ್ಷೇತರರಾಗಿ ಆನಂದ ಜಕಾತಿ, ಬ್ಲೂ ಇಂಡಿಯಾ ಪಕ್ಷದಿಂದ ತಳವಾರ ಶಿವಕುಮಾರ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಸೆ ನಾಮಪತ್ರ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವೀರಣ್ಣ ಚರಂತಿಮಠ, ‘ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನರಿಗೆ ಆಕ್ರೋಶವಿದೆ. ಬಿಜೆಪಿ, ಹಿಂದುತ್ವಕ್ಕೆ ಗುಲುವಾಗಲಿದೆ’ ಎಂದರು.

ವೀರಣ್ಣ ಚರಂತಿಮಠ ಅವರು ದಶಕಗಳಿಂದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿದ್ದಾರೆ. ಬಾಗಲಕೋಟೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸೇರಿ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೂ ಅಧ್ಯಕ್ಷರಾಗಿದ್ದರು.

2004ರಲ್ಲಿ ಮೊದಲ ಬಾರಿಗೆ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. 2008 ಮತ್ತು 2018ರ ಚುನಾವಣೆಯಲ್ಲಿ ಗೆದ್ದಿದ್ದರು. 2013 ಮತ್ತು 2023ರ ಚುನಾವಣೆಯಲ್ಲಿ ಸೋತಿದ್ದರು.

ಚರಂತಿಮಠರ ಚರ ಆಸ್ತಿ, ಸಾಲ ಹೆಚ್ಚಳ

ವೀರಣ್ಣ ಚರಂತಿಮಠರ ಚರ ಆಸ್ತಿ ಹಾಗೂ ಸಾಲದಲ್ಲಿ ಹೆಚ್ಚಳವಾಗಿದೆ. 2023ರಲ್ಲಿ ಚರ ಆಸ್ತಿ ₹3.91 ಕೋಟಿ ಇದ್ದದ್ದು, 2026ರಲ್ಲಿ ₹7.91 ಕೋಟಿಗೆ ಹೆಚ್ಚಾಗಿದೆ. ಅದೇ ರೀತಿ ಕಳೆದ ಬಾರಿ ಕೇವಲ ₹59.40 ಲಕ್ಷ ಇದ್ದ ಸಾಲದ ಮೊತ್ತವು ₹4.65 ಕೋಟಿಗೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.