ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ನ ಉಮೇಶ ಮೇಟಿ ಗೆಲ್ಲಲು ಹಲವು ಕಾರಣಗಳಿವೆ. ಅವುಗಳಲ್ಲಿ ಪಂಚ ಗ್ಯಾರಂಟಿಗಳ ಬಲ, ಎಚ್.ವೈ.ಮೇಟಿ ಅವರ ಸಾವಿನ ಅನುಕಂಪದ ಅಲೆ, ಸಂಪನ್ಮೂಲಗಳ ಸರಿಯಾದ ವಿತರಣೆ, ಸಚಿವರಾದ ಸತೀಶ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ ಅವರ ತಂತ್ರಗಾರಿಕೆ ಪ್ರಮುಖವಾದವು.

ಪಂಚ ಗ್ಯಾರಂಟಿಯ ಹೆಚ್ಚಿನ ಲಾಭ ಪಡೆದ ಮಹಿಳೆಯರನ್ನೇ ಗುರಿ ಆಗಿಸಿಕೊಂಡ ಕಾಂಗ್ರೆಸ್ ಮುಖಂಡರು, ‘ಗ್ಯಾರಂಟಿಗಳು ಮುಂದುವರೆಯಬೇಕು ಅಲ್ವಾ’ ಎಂದು ಭಾಷಣ
ದಲ್ಲೇ ಮಾತಿನ ಬೆದರಿಕೆ ಹಾಕಿದ್ದರು. ಜೊತೆಗೆ ಮನೆ, ಮನೆಗೆ ತೆರಳಿ ಗ್ಯಾರಂಟಿಗಳನ್ನು ನೆನಪಿಸುವ ಕಾರ್ಯ ಮಾಡಿದ್ದರು. ಪರಿಣಾಮ ಕಾಂಗ್ರೆಸ್ಗೆ ದಾಖಲೆಯ ಮುನ್ನಡೆ ದಕ್ಕಿತ್ತು.

ಎಚ್.ವೈ.ಮೇಟಿ ಅವರ ನಿಧನದ ಅನುಕಂಪ ನಗರದ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿತ್ತು. ಅದನ್ನು ಮತಗಳನ್ನಾಗಿ ಪರಿವರ್ತಿಸುವ ಕಾರ್ಯವನ್ನು ಎಚ್.ವೈ. ಮೇಟಿ ಕುಟುಂಬದ ಸದಸ್ಯರು, ಮುಖಂಡರು, ಕಾರ್ಯಕರ್ತರು ಮಾಡಿದರು.

ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರ ತಂತ್ರ, ಸಂಪನ್ಮೂಲ ವಿತರಣೆ, ನಾಯಕರ ನಡುವಿನ ಅಸಮಾಧಾನ ತಿಳಿಗೊಳಿಸುವ ಹೊಣೆಸಚಿವ ಸತೀಶ ಜಾರಕಿಹೊಳಿ ಅವರಿಗೆ ವಹಿಸಲಾಗಿತ್ತು. ಚುಣಾವಣೆ ಘೋಷಣೆಗೂ ಎರಡು ತಿಂಗಳ ಮುನ್ನ ತಮ್ಮ ತಂಡದ ಮೂಲಕ ಸಮೀಕ್ಷೆ ಮಾಡಿಸಿದ್ದ ಜಾರಕಿಹೊಳಿ ಅವರು, ಇಡೀ ಚುನಾವಣೆಯನ್ನು ಮಾತಿನ ಭರಾಟೆಯಿಲ್ಲದೆ ಮೌನವಾಗಿ ನಿಭಾಯಿಸಿದರು.

ಹಿಂದಿನ ಐದು ಚುನಾವಣೆಗಳಲ್ಲೂ ಕಾಂಗ್ರೆಸ್ಗೆ ಬಿಜೆಪಿ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ಅವರೇ ಎದುರಾಳಿ. ಅವರ ಬಗ್ಗೆ ಕಾಂಗ್ರೆಸ್ನವರು ವೈಯಕ್ತಿಕ ಟೀಕೆ ಮಾಡಿರಲಿಲ್ಲ. ಈ ಬಾರಿ ಅವರ ವಿರುದ್ಧ ವೈಯಕ್ತಿಕ ಟೀಕೆ ಮೂಲಕ ಮತಗಳನ್ನು ಸೆಳೆಯುವ ಯತ್ನವೂ ಫಲ ನೀಡಿದಂತಿದೆ. ತಮ್ಮ ಆತ್ಮೀಯ, ತಮ್ಮದೇ ಸಮುದಾಯದ ಮುಖಂಡರಾಗಿದ್ದ ಎಚ್.ವೈ. ಮೇಟಿ ಅವರ ಕ್ಷೇತ್ರ ಉಳಿಸಿಕೊಳ್ಳುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯಾಗಿಸಿಕೊಂಡು ಆರು ದಿನಗಳ ಕಾಲ ಪ್ರಚಾರ ನಡೆಸಿದ್ದರು.

ಪ್ರಚಾರದ ವೇಳೆ ಬಿಜೆಪಿಯಲ್ಲಿನ ಭಿನ್ನಮತ ಶಮನವಾದಂತೆ ಕಂಡು ಬಂದರೂ ಮತ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ನೋಡಿದಾಗ ಶಮನವಾದ ಲಕ್ಷಣಗಳು ಕಂಡು ಬಂದಿಲ್ಲ. ಒಗ್ಗಟ್ಟಿನ ಮಂತ್ರ ವೇದಿಕೆಗಷ್ಟೇ ಸೀಮಿತವಾಯಿತೇ ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ. ಗ್ರಾಮೀಣ
ಭಾಗದಲ್ಲಿ ಪಕ್ಷದ ಸಂಘಟನೆ ದುರ್ಬಲವಾದ್ದದ್ದು ಗೊತ್ತಿದ್ದು, ಸಬಲಗೊಳಿಸಲು ಪ್ರಯತ್ನಗಳು ನಡೆಯದ ಕಾರಣ ಸೋಲು ಎದುರಿಸಬೇಕಾಯಿತು ಎನ್ನುತ್ತಾರೆ ಬಿಜೆಪಿ ಮುಖಂಡರು. ಅಭ್ಯರ್ಥಿ ವೀರಣ್ಣ ಚರಂತಿಮಠರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್ ಸೇರ್ಪಡೆಯೂ ಪರಿಣಾಮ ಬೀರಿದೆ.

ಯತ್ನಾಳ ಮರು ಸೇರ್ಪಡೆ ಹಾದಿ ಕಠಿಣ: ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ ಪಾಟೀಲ ಅವರ ಪಕ್ಷ ಮರು ಸೇರ್ಪಡೆ ಹಾದಿ ಕಠಿಣವಾಗಲಿದೆ.

ಯತ್ನಾಳರನ್ನು ಕರೆಸಬೇಕು ಎಂದು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಒತ್ತಡ ಹೇರಲಾಗಿತ್ತು. ಚುನಾವಣೆ ವೇಳೆ ಯತ್ನಾಳ, ‘ಚರಂತಿಮಠರ ಗೆಲುವಿನ ನಂತರ ಉಳಿದ ನಾಯಕರೇ ನನ್ನ ಸೇರ್ಪಡೆ ಬಗ್ಗೆ ನಾಯಕರ ಎದುರು ಮಾತನಾಡುವರು’ ಎಂದಿದ್ದರು. ಫಲಿತಾಂಶ ಉಲ್ಟಾ ಆಗಿದೆ. ಯತ್ನಾಳರ ಸೇರ್ಪಡೆಗೆ ಹಲವು ಕಂಟಕಗಳು ಎದುರಾಗಲಿವೆ.

ನಿರಂತರ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

ಬಾಗಲಕೋಟೆ ಕ್ಷೇತ್ರದ ಮತ ಎಣಿಕೆ ವೇಗವಾಗಿ ನಡೆದು ಮಧ್ಯಾಹ್ನ 12ರ ವೇಳೆಗೆ ಫಲಿತಾಂಶ ಪ್ರಕಟವಾಯಿತು. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಮತ ಎಣಿಕೆ ಕೇಂದ್ರದತ್ತ ಸುಳಿದಿರಲಿಲ್ಲ.

ಮೊದಲ ಸುತ್ತಿನಿಂದಲೇ ಮುನ್ನಡೆ ಪಡೆದ ಕಾಂಗ್ರೆಸ್, ಕೊನೆಯವರೆಗೂ ಮುನ್ನಡೆ ಅನ್ನು ಕಾಯ್ದುಕೊಂಡಿತು. ನಡುವೆ ಕೆಲ ಸುತ್ತುಗಳಲ್ಲಿ ಮುನ್ನಡೆ ಅಂತರ ಕಡಿಮೆಯಾದರೂ, ಕೊನೆಯ ಸುತ್ತುಗಳಲ್ಲಿ ಮತ್ತೇ ಮುನ್ನಡೆ ಹೆಚ್ಚಾಯಿತು.

ಆರನೇ ಸುತ್ತಿನ ವೇಳೆಗೆ ಕಾಂಗ್ರೆಸ್ಗೆ 15 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಬಂದಿತು. ಎಣಿಕೆ ಕೇಂದ್ರದಲ್ಲಿದ್ದ ಬಿಜೆಪಿ ನಾಯಕರು ಒಬ್ಬೊಬ್ಬರಾಗಿಯೇ ಹೊರ ನಡೆದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಎಣಿಕೆ ಕೇಂದ್ರದತ್ತ ಬರಲಿಲ್ಲ.

ಮುನ್ನಡೆ ಅಂತರ ಹೆಚ್ಚಿದಂತೆ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಡೊಳ್ಳು ಬಾರಿಸಿ, ಬಣ್ಣ ಎರಚಿ ಸಂಭ್ರಮಿಸಿದರು. 15 ಸುತ್ತುಗಳ ಬಳಿಕ ಕಾಂಗ್ರೆಸ್ ಮುಖಂಡರಿಗೆ ಗೆಲುವು ಖಚಿತವಾಯಿತು.

ಅಭ್ಯರ್ಥಿ ಉಮೇಶ ಮೇಟಿ ಎಣಿಕೆ ಕೇಂದ್ರಕ್ಕೆ ಧಾವಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ ಧಾವಿಸಿದರು. ಗೆಲುವು ಘೋಷಣೆಯಾಗುತ್ತಿದ್ದಂತೆಯೇ ಜಯಕಾರಗಳೂ ಮೊಳಗಿದವು

ಫಲಿತಾಂಶ

ಗೆದ್ದ ಅಭ್ಯರ್ಥಿ; ಉಮೇಶ ಮೇಟಿ (ಕಾಂಗ್ರೆಸ್)
ಪಡೆದ ಮತಗಳು; 98,919
ಸಮೀಪದ ಪ್ರತಿಸ್ಪರ್ಧಿ: ವೀರಣ್ಣ ಚರಂತಿಮಠ (ಬಿಜೆಪಿ)
ಗೆಲುವಿನ ಅಂತರ: 22,332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.